ADVERTISEMENT

ಉಕ್ರೇನ್‌ನಲ್ಲಿ ಆಕ್ರಮಣ ಮುಂದುವರಿಯಲಿದೆ: ರಷ್ಯಾ

ರಾಯಿಟರ್ಸ್
Published 5 ಮಾರ್ಚ್ 2022, 8:15 IST
Last Updated 5 ಮಾರ್ಚ್ 2022, 8:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಾಸ್ಕೊ: ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ವ್ಯಾಪಕ ಆಕ್ರಮಣವನ್ನು ಮುಂದುವರೆಸಲಿವೆ ಎಂದು ರಷ್ಯಾದ ಸುದ್ದಿ ಸಂಸ್ಥೆ ‘ಆರ್‌ಐಎ’ ರಷ್ಯಾದ ರಕ್ಷಣಾ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಶನಿವಾರ ವರದಿ ಮಾಡಿದೆ.

ವೊಲ್ನೋವಾಖಾ ಮತ್ತು ಮರಿಯುಪೋಲ್ ಪ್ರದೇಶದಲ್ಲಿ ರಷ್ಯಾ ದಾಳಿ ನಿಲ್ಲಿಸಿದೆ. ನಮ್ಮ ಸೇನೆ ಸುತ್ತುವರಿದಿರುವ ಈ ಪ್ರದೇಶದಲ್ಲಿ ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು, ನಾಗರಿಕರು ನಗರದಿಂದ ಹೊರಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ರಷ್ಯಾ ತಿಳಿಸಿದೆ.

ಕಳೆದ ಹಲವು ದಿನಗಳಿಂದ ಮರಿಯುಪೋಲ್‌ ನಗರದ ಮೇಲೆ ತೀವ್ರ ದಾಳಿ ನಡೆಸಿದ್ದ ರಷ್ಯಾ ಇಂದು ಬೆಳಗ್ಗೆ ಈ ಪ್ರದೇಶದಲ್ಲಿ ಕದನ ವಿರಾಮ ಘೋಷಣೆ ಮಾಡಿತ್ತು. ಇದರ ಜೊತೆಗೆ ವೊಲ್ನೋವಾಖಾದಲ್ಲೂ ದಾಳಿ ನಿಲ್ಲಿಸಿರುವುದಾಗಿ ಹೇಳಿತ್ತು.

ADVERTISEMENT

ಅದರ ಕದನವಿರಾಮದ ಘೋಷಣೆ ಬೆನ್ನಿಗೇ ರಷ್ಯಾ ಸೇನೆಯಿಂದ ಈ ಸ್ಪಷ್ಟನೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.