ADVERTISEMENT

Russia Ukraine Conflict: ಉಕ್ರೇನ್‌ನ 125 ಡ್ರೋನ್‌ ಹೊಡೆದುರುಳಿಸಿದ ರಷ್ಯಾ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:25 IST
Last Updated 29 ಸೆಪ್ಟೆಂಬರ್ 2024, 15:25 IST
<div class="paragraphs"><p>ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್‌ನ&nbsp;ಝಪೊರಿಝಿಯಾ ನಗರದ ಕಟ್ಟಡವೊಂದಕ್ಕೆ ಹಾನಿಯಾಗಿದೆ </p></div>

ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್‌ನ ಝಪೊರಿಝಿಯಾ ನಗರದ ಕಟ್ಟಡವೊಂದಕ್ಕೆ ಹಾನಿಯಾಗಿದೆ

   

ಕೀವ್: ರಷ್ಯಾ ಸೇನೆಯು ಭಾನುವಾರ ಉಕ್ರೇನ್‌ನ 125 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡೂ ದೇಶಗಳ ನಡುವೆ ಯುದ್ಧ ಆರಂಭವಾದ ಬಳಿಕ (2022ರ ಫೆಬ್ರುವರಿ 22ರಂದು) ಒಂದೇ ದಿನ ಉಕ್ರೇನ್‌, ಇಷ್ಟು ದೊಡ್ಡ ಪ್ರಮಾಣದ ಡ್ರೋನ್‌ ದಾಳಿ ನಡೆಸಿದ್ದು ಇದೇ ಮೊದಲು.

ADVERTISEMENT

‘ರಷ್ಯಾದ ಏಳು ಪ್ರಾಂತ್ಯಗಳನ್ನು ಗುರಿಯಾಗಿಸಿ ಡ್ರೋನ್‌ ದಾಳಿ ನಡೆದಿದೆ. ವೊಲ್ಗೊಗ್ರಾಡ್‌ ಮೇಲೆ ಅತಿಹೆಚ್ಚು ಅಂದರೆ 67 ಡ್ರೋನ್‌ಗಳನ್ನು ಹಾರಿ ಬಿಡಲಾಗಿತ್ತು. ವೊರೊನೆಝ್‌ ಪ್ರಾಂತ್ಯದಲ್ಲಿ 17 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇಲ್ಲಿ ಡ್ರೋನ್‌ಗಳ ಅವಶೇಷ ಬಿದ್ದು ವಸತಿ ಸಮುಚ್ಛಯ ಹಾಗೂ ಒಂದು ಮನೆಗೆ ಹಾನಿಯಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ರೊಸ್ತೊವ್‌ ಪ್ರಾಂತ್ಯದ ಮೇಲೆ 18 ಡ್ರೋನ್‌ಗಳು ಹಾರಿಬಂದವು. ಡ್ರೋನ್‌ ಅವಶೇಷ ಬಿದ್ದಾಗ ಉಂಟಾದ ಬೆಂಕಿಯಿಂದ 20 ಹೆಕ್ಟೇರ್‌ನಷ್ಟು ಕಾಡು ನಾಶವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಟ ಮುಂದುವರಿಸಿದ್ದಾರೆ’ ಎಂದು ಇಲ್ಲಿನ ಗವರ್ನರ್‌ ವಾಸಿಲಿ ಗೊಲುಬೆವ್ ಮಾಹಿತಿ ನೀಡಿದ್ದಾರೆ.

14 ಮಂದಿಗೆ ಗಾಯ: ದಕ್ಷಿಣ ಉಕ್ರೇನ್‌ನ ಝಪೊರಿಝಿಯಾ ನಗರದ ಮೇಲೆ ರಷ್ಯಾ ಸೇನೆ ಶನಿವಾರ ರಾತ್ರಿಯಿಡೀ ಕ್ಷಿಪಣಿ ದಾಳಿ ನಡೆಸಿದ್ದು, 14 ಮಂದಿ ಗಾಯಗೊಂಡಿದ್ದಾರೆ.

‘ಬಹುಮಹಡಿ ಕಟ್ಟಡಗಳು ಮತ್ತು ವಸತಿ ಸಮುಚ್ಛಯಗಳಿಗೆ ಹಾನಿ ಉಂಟಾಗಿದೆ. ರೈಲ್ವೆ ಮೂಲಸೌಕರ್ಯದ ಮೇಲೂ ದಾಳಿ ನಡೆದಿದ್ದು, ನಗರದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.