
ಮೆಟ್ರೊ ಸುರಂಗದಲ್ಲಿ ಆಶ್ರಯ ಪಡೆದಿರುವಜನ
ಕೀವ್: ರಷ್ಯಾ ಸೇನೆ ಶುಕ್ರವಾರ ರಾತ್ರಿ ಉಕ್ರೇನ್ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಒಬ್ಬ ಮೃತಪಟ್ಟು, 23 ಮಂದಿ ಗಾಯಗೊಂಡಿದ್ದಾರೆ.
ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಉಕ್ರೇನ್, ರಷ್ಯಾ ಮತ್ತು ಅಮೆರಿಕದ ಪ್ರತಿನಿಧಿಗಳು ಅಬುಧಾಬಿಯಲ್ಲಿ ಮಾತುಕತೆಯಲ್ಲಿ ನಿರತರಾಗಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.
ಉಕ್ರೇನ್ ರಾಜಧಾನಿ ಕೀವ್ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್ ನಗರದ ಮಿಲಿಟರಿ ಆಡಳಿತದ ಮುಖ್ಯಸ್ಥ ತೈಮೂರ್ ತಚೆಂಕೊ ಹೇಳಿದ್ದಾರೆ.
ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ಖಾರ್ಕಿವ್ ಮೇಯರ್ ಇಹೊರ್ ತೆರೆಖೊವ್ ತಿಳಿಸಿದ್ದಾರೆ.
ಮತ್ತೊಂದು ಗ್ರಾಮ ವಶ (ಮಾಸ್ಕೊ ವರದಿ): ರಷ್ಯಾ ಸೇನೆಯು ಉಕ್ರೇನ್‌ನ ಖಾರ್ಕಿವ್ ಪ್ರಾಂತ್ಯದ ಮತ್ತೊಂದು ಗ್ರಾಮವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ. ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ತನ್ನ ಸೇನೆ ಭಾರಿ ಡ್ರೋನ್ ದಾಳಿ ನಡೆಸಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.