ಮಾಸ್ಕೊ: ಜೆಕ್‌ನ 20 ರಾಜತಾಂತ್ರಿಕ ಅಧಿಕಾರಿಗಳಿಗೆ ಒಂದು ದಿನದೊಳಗೆ ದೇಶವನ್ನು ತೊರೆಯುವಂತೆ ರಷ್ಯಾ ಭಾನುವಾರ ಆದೇಶಿಸಿದೆ.
ಇತ್ತೀಚಿಗೆ ಜೆಕ್ ಸರ್ಕಾರವು,ರಷ್ಯಾದ 18 ರಾಜತಾಂತ್ರಿಕ ಅಧಿಕಾರಿಗಳನ್ನು ಗೂಢಚರ್ಯ ಆರೋಪದಡಿ ಅಲ್ಲಿಂದ ಉಚ್ಛಾಟನೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ರಷ್ಯಾ ವಿದೇಶಾಂಗ ಸಚಿವಾಲಯವು ‘ಜೆಕ್‌ನ ರಾಯಭಾರಿ ವಿಟೆಜ್ಸ್ಲಾವ್ ಪಿವೊಂಕಾ ಅವರಿಗೆ ಭಾನುವಾರ ಸಂಜೆ ಸಮನ್ಸ್ ನೀಡಿದ್ದು, 20 ರಾಜತಾಂತ್ರಿಕ ಅಧಿಕಾರಿಗಳು ಸೋಮವಾರದೊಳಗೆ ದೇಶ ತೊರೆಯಬೇಕು’ ಎಂದು ಸೂಚಿಸಿದೆ.
‘ರಷ್ಯಾದ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ಹಾಗಾಗಿ ಅಮೆರಿಕವನ್ನು ಮೆಚ್ಚಿಸುವ ನಿಟ್ಟಿನಲ್ಲಿ ಜೆಕ್ ಈ ಕ್ರಮಕೈಗೊಂಡಿದೆ’ ಎಂದು ಸಚಿವಾಲಯ ದೂರಿದೆ.
2014ರ ಮದ್ದುಗುಂಡು ಡಿಪೋ ಸ್ಪೋಟದಲ್ಲಿ ರಷ್ಯಾದ ಸೇನೆಯ ಏಜೆಂಟ್ಸ್ ಭಾಗಿಯಾಗಿದ್ದರು. ಈ 18 ರಾಜತಾಂತ್ರಿಕ ಅಧಿಕಾರಿಗಳು ಅವರಿಗಾಗಿ ಗೂಢಚರ್ಯೆ ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆ ಜೆಕ್ ಸೇನೆಯು ಸಾಕ್ಷ್ಯಧಾರಗಳನ್ನು ನೀಡಿವೆ. ಇದರ ಆಧಾರದ ಮೇಲೆ ಅಧಿಕಾರಿಗಳನ್ನು ಉಚ್ಛಾಟನೆ ಮಾಡಲಾಗಿದೆ’ ಎಂದು ಜೆಕ್ ಪ್ರಧಾನಿ ಆಂಡ್ರೆಜ್ ಬಾಬಿಸ್ ಶನಿವಾರ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.