ADVERTISEMENT

ನ್ಯಾಟೊ ಶೃಂಗ ಆರಂಭಕ್ಕೂ ಮುನ್ನ ಕೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ರಾಯಿಟರ್ಸ್‌
Published 11 ಜುಲೈ 2023, 12:27 IST
Last Updated 11 ಜುಲೈ 2023, 12:27 IST
ಉಕ್ರೇನಿನ ಕೀವ್‌ ನಗರದ ವಾಯವ್ಯದ ಮೊಶ್ಚುನ್ ಗ್ರಾಮದಲ್ಲಿ ರಷ್ಯಾ ಬಾಂಬ್‌ ದಾಳಿಗೆ ನಾಶವಾದ ವಸತಿ ಪ್ರದೇಶದ ವೈಮಾನಿಕ ನೋಟ
ಉಕ್ರೇನಿನ ಕೀವ್‌ ನಗರದ ವಾಯವ್ಯದ ಮೊಶ್ಚುನ್ ಗ್ರಾಮದಲ್ಲಿ ರಷ್ಯಾ ಬಾಂಬ್‌ ದಾಳಿಗೆ ನಾಶವಾದ ವಸತಿ ಪ್ರದೇಶದ ವೈಮಾನಿಕ ನೋಟ    – ಎಎಫ್‌ಪಿ ಚಿತ್ರ

ಕೀವ್‌: ರಾಜಧಾನಿ ಕೀವ್‌ ಮೇಲೆ ಮಂಗಳವಾರ ಮುಂಜಾನೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್ ಮಿಲಿಟರಿ ತಿಳಿಸಿದೆ. 

ರಷ್ಯಾದಿಂದ ಎದುರಾಗುವ ಭದ್ರತಾ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಲಿಥುವೇನಿಯಾದಲ್ಲಿ ನ್ಯಾಟೊ ಶೃಂಗಸಭೆ ಆಯೋಜನೆಗೊಂಡಿದ್ದು, ಸಭೆ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ರಷ್ಯಾ ಈ ದಾಳಿ ನಡೆಸಿದೆ. 

ಶತ್ರು ರಾಷ್ಟ್ರ ರಷ್ಯಾ ಈ ತಿಂಗಳಲ್ಲಿ ಕೀವ್‌ ಮೇಲೆ ನಡೆಸಿದ ಎರಡನೇ ವೈಮಾನಿಕ ದಾಳಿ ಇದು ಎಂದು ಉಕ್ರೇನ್‌ನ ಮಿಲಿಟರಿ ಅಧಿಕಾರಿ ಸೆರ್ಹಿ ಪೋಪ್ಕೊ ಅವರು ಟೆಲಿಗ್ರಾಮ್‌ ಚಾನೆಲ್‌ನಲ್ಲಿ ಹೇಳಿದ್ದಾರೆ.  

ADVERTISEMENT

ಇನ್ನೊಂದೆಡೆ, ದಾಳಿಗಾಗಿ ರಷ್ಯಾ ರವಾನಿಸಿದ್ದ ಇರಾನ್‌ ನಿರ್ಮಿತ ಶಾಹೆದ್‌ ಡ್ರೋನ್‌ಗಳನ್ನು ಉಕ್ರೇನ್‌ನ ವಾಯುರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದೂ ಪೋಪ್ಕೊ ಹೇಳಿದ್ದಾರೆ. ವೈಮಾನಿಕ ದಾಳಿಯಿಂದಾದ ಹಾನಿಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.  

ಕೀವ್‌ನ ಹಲವು ಕಡೆಗಳಲ್ಲಿ ಬಾಂಬ್‌ ಸ್ಫೋಟದ ಭಾರಿ ಸದ್ದು ಕೇಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ. 

ಲಿಥುವೇನಿಯಾದ ರಾಜಧಾನಿ ವಿಲ್ನಿಯಸ್‌ನಲ್ಲಿ ಮಂಗಳವಾರದಿಂದ ನ್ಯಾಟೊ ಶೃಂಗಸಭೆ ಆರಂಭವಾಗಿದೆ. ರಷ್ಯಾದ ಯಾವುದೇ ದಾಳಿ ಎದುರಿಸಲು ಸಮಗ್ರ ಯೋಜನೆಗಳನ್ನು ಅನುಮೋದಿಸಲು ನ್ಯಾಟೊ ರಾಷ್ಟ್ರಗಳು ಸಿದ್ಧವಾಗಿವೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.