ADVERTISEMENT

ರಷ್ಯಾ ದಾಳಿಯಲ್ಲಿ 22 ಮಂದಿ ಸಾವು: ಉಕ್ರೇನ್

ಏಜೆನ್ಸೀಸ್
Published 29 ಜುಲೈ 2025, 12:39 IST
Last Updated 29 ಜುಲೈ 2025, 12:39 IST
<div class="paragraphs"><p>ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್‌ನ ಝಪೊರಿಝಿಯಾ ಪ್ರಾಂತ್ಯದ ಬಿಲೆಂಕೆ ಗ್ರಾಮದಲ್ಲಿರುವ ಜೈಲು ಕಟ್ಟಡಕ್ಕೆ ಹಾನಿಯಾಗಿದೆ&nbsp; &nbsp;&nbsp;</p></div>

ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್‌ನ ಝಪೊರಿಝಿಯಾ ಪ್ರಾಂತ್ಯದ ಬಿಲೆಂಕೆ ಗ್ರಾಮದಲ್ಲಿರುವ ಜೈಲು ಕಟ್ಟಡಕ್ಕೆ ಹಾನಿಯಾಗಿದೆ    

   

ಪಿಟಿಐ ಚಿತ್ರ

ಕೀವ್‌: ಜೈಲು ಹಾಗೂ ಆಸ್ಪತ್ರೆಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಕ್ಷಿಪಣಿಗಳಿಂದ ನಡೆಸಿದ ದಾಳಿಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ADVERTISEMENT

ಯುದ್ಧ ನಿಲ್ಲಿಸದಿದ್ದಲ್ಲಿ ಮತ್ತಷ್ಟು ಅಧಿಕ ಸುಂಕ ಹಾಗೂ ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆದರಿಕೆ ಹೊರತಾಗಿಯೂ ರಷ್ಯಾ ತನ್ನ ದಾಳಿ ಮುಂದುವರಿಸಿದೆ.

ಉಕ್ರೇನ್‌ನ ಆಗ್ನೇಯ ಭಾಗದ ಝಪೊರಿಝಿಯಾ ಪ್ರಾಂತ್ಯದಲ್ಲಿನ ಜೈಲೊಂದರ ಮೇಲೆ ನಾಲ್ಕು ಶಕ್ತಿಶಾಲಿ ಬಾಂಬ್‌ಗಳಿಂದ ರಷ್ಯಾ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಕನಿಷ್ಠ 17 ಕೈದಿಗಳು ಮೃತಪಟ್ಟು, ಇತರ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ದಿನಿಪ್ರೊ ಪ್ರಾಂತ್ಯದಲ್ಲಿ, ಮೂರು ಅಂತಸ್ತಿನ ಕಟ್ಟಡಕ್ಕೆ ಕ್ಷಿಪಣಿಗಳು ಅಪ್ಪಳಿಸಿದ್ದರಿಂದ, ಸಮೀಪದಲ್ಲಿಯೇ ಇರುವ ಆಸ್ಪತ್ರೆಗೆ ಹಾನಿಯಾಗಿದೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟು, ಗರ್ಭಿಣಿ ಸೇರಿ 8 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

‘ನಗರಗಳು, ಪಟ್ಟಣಗಳು ಹಾಗೂ ಗ್ರಾಮಗಳು ಸೇರಿ ದೇಶದ 73 ಸ್ಥಳಗಳ ಮೇಲೆ ರಷ್ಯಾ ಪಡೆಗಳು ದಾಳಿ ನಾಡಿವೆ. ಇವು ಉದ್ದೇಶಪೂರ್ವಕವಾಗಿಯೇ ನಡೆಸಿರುವ ದಾಳಿಗಳಾಗಿವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.