ADVERTISEMENT

ಉಕ್ರೇನ್‌ನ ಲೈಸಿಚಾನ್‌ಸ್ಕ್‌ ನಗರ ವಶಕ್ಕೆ ರಷ್ಯಾ ಯತ್ನ

ಏಜೆನ್ಸೀಸ್
Published 25 ಜೂನ್ 2022, 14:33 IST
Last Updated 25 ಜೂನ್ 2022, 14:33 IST
ರಷ್ಯಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಿಂದಾಗಿ ಮನೆಗಳಿಗೆ ಹಾನಿಯಾಗಿರುವುದನ್ನು ಉಕ್ರೇನ್‌ನ ಡೊನೆಟ್‌ಸ್ಕ್‌ ನಿವಾಸಿಯೊಬ್ಬರು ತೋರಿಸಿದರು –ಎಎಫ್‌ಪಿ ಚಿತ್ರ
ರಷ್ಯಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಿಂದಾಗಿ ಮನೆಗಳಿಗೆ ಹಾನಿಯಾಗಿರುವುದನ್ನು ಉಕ್ರೇನ್‌ನ ಡೊನೆಟ್‌ಸ್ಕ್‌ ನಿವಾಸಿಯೊಬ್ಬರು ತೋರಿಸಿದರು –ಎಎಫ್‌ಪಿ ಚಿತ್ರ   

ಕೀವ್‌: ಪೂರ್ವ ಉಕ್ರೇನ್‌ನ ಎರಡನೇ ನಗರಲೈಸಿಚಾನ್‌ಸ್ಕ್‌ ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿದ್ದು,ವಾರಗಳ ಹೋರಾಟದ ನಂತರಉಕ್ರೇನ್ ಪಡೆಗಳು ಈ ನಗರದಿಂದ ವಾಪಸಾಗಲು ಪ್ರಾರಂಭಿಸಿವೆ ಎಂದು ಉಕ್ರೇನ್‌ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್‌ಹಿಯ್‌ ಹೈಡೇ ತಿಳಿಸಿದ್ದಾರೆ.

ನಗರದ ಹೃದಯಭಾಗದಿಂದ ದೂರವಿರುವ ಪ್ರದೇಶಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ಆರಂಭಿಸಿದೆ. ದಕ್ಷಿಣದಿಂದ ಲೈಸಿಚಾನ್‌ಸ್ಕ್‌ ನಗರನಿರ್ಬಂಧಿಸಲು ಪ್ರಯತ್ನಿಸುತ್ತಿವೆ.

ರಷ್ಯಾದ ಬಾಂಬ್ ದಾಳಿಯಿಂದ ಸೆವೆಯೆರೊಡೊನೆಟ್‌ಸ್ಕ್ ನ ಹೆಚ್ಚಿನ ಭಾಗ ಹಾನಿಗೊಂಡಿದೆ. ಉಕ್ರೇನ್ ಪಡೆಗಳ ನೂರಾರು ಸೈನಿಕರು ನಗರದ ಅಂಚಿನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸುಮಾರು 500 ನಾಗರಿಕರೊಂದಿಗೆ ಆಶ್ರಯ ಪಡೆದಿದ್ದಾರೆ.

ADVERTISEMENT

ಶನಿವಾರ ಬೆಳಗ್ಗೆ ಮಧ್ಯ ಉಕ್ರೇನ್‌ನ ಝೈಟೊಮಿರ್ ಪ್ರದೇಶದ ಮೇಲೆ ಸುಮಾರು ರಷ್ಯಾದ ಸುಮಾರು 30 ರಾಕೆಟ್‌ಗಳನ್ನು ಹಾರಿಸಿದ್ದು, ಒಬ್ಬ ಉಕ್ರೇನ್‌ ಸೈನಿಕನ ಹತ್ಯೆಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ವಿಟಾಲಿ ಬುಚೆಂಕೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.