ADVERTISEMENT

ರಷ್ಯಾದ ವಿವಿಧೆಡೆ ಡ್ರೋನ್‌ ದಾಳಿ

ಎಪಿ
Published 3 ಆಗಸ್ಟ್ 2024, 16:02 IST
Last Updated 3 ಆಗಸ್ಟ್ 2024, 16:02 IST

ಮಾಸ್ಕೊ: ರಷ್ಯಾದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಉಕ್ರೇನ್‌ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಸೇನೆಯು ಪ್ರತಿದಾಳಿ ನಡೆಸಿ ಸುಮಾರು 75 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ರೊಸ್ತೊವ್‌ ವಲಯದಲ್ಲಿಯೇ ಸುಮಾರು 36 ಡ್ರೋನ್‌ ಹೊಡೆದುರುಳಿಸಲಾಗಿದೆ. ಈ ವಲಯದಲ್ಲಿ ಒಟ್ಟು 55 ಡ್ರೋನ್‌ಗಳನ್ನು ಪ್ರಯೋಗಿಸಲಾಗಿತ್ತು ಎಂದು ತಿಳಿಸಿದೆ.

ADVERTISEMENT

ಉಕ್ರೇನ್‌ನ ಅಧಿಕಾರಿಗಳು, ರಷ್ಯಾದ ಮೊರೊಜೊವಸ್ಕ್‌ನಲ್ಲಿ ಇರುವ ಸೇನಾ ನೆಲೆ ಮತ್ತು ಶಸ್ತ್ರಾಸ್ತ್ರ ಅಡಗಿಸಿಟ್ಟಿದ್ದ ತಾಣವನ್ನು ಗುರಿಯಾಗಿಸಿ ತನ್ನ ಸೇನೆಯು ದಾಳಿ ನಡೆಸಿದೆ ಎಂದು ತಿಳಿಸಿದೆ.

ಒರಿಯೊಲ್‌ ವಲಯದಲ್ಲಿ ವಸತಿ ಸಂಕೀರ್ಣವನ್ನು  ಗುರಿಯಾಗಿಸಿ ಎರಡು ಡ್ರೋನ್ ದಾಳಿ ನಡೆದಿದ್ದು, ಬೆಂಕಿ ಹೊತ್ತಿಕೊಂಡಿತ್ತು ಎಂದು ಅಲ್ಲಿನ ಗವರ್ನರ್ ಆಂಡ್ರೆ ಲಿಚ್‌ಕೊವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.