ADVERTISEMENT

ಉಕ್ರೇನ್‌ ಡ್ರೋನ್‌ ಹೊಡೆದುರುಳಿಸಿದ ರಷ್ಯಾ

ಎಪಿ
Published 28 ಜುಲೈ 2023, 13:31 IST
Last Updated 28 ಜುಲೈ 2023, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ: ಮಾಸ್ಕೊ ಹೊರವಲಯದಲ್ಲಿ ಉಕ್ರೇನ್‌ನ ಡ್ರೋನ್‌ವೊಂದನ್ನು ಶುಕ್ರವಾರ ಬೆಳಿಗ್ಗೆ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಈ ತಿಂಗಳಲ್ಲಿ ಮಾಸ್ಕೊ ಮೇಲೆ ನಡೆದ ಮೂರನೇ ಡ್ರೋನ್‌ ದಾಳಿ ಇದಾಗಿದೆ.

‘ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಡ್ರೋನ್‌ ಅನ್ನು ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿ ಹೊಡೆದುರುಳಿಸಲಾಗಿದೆ ಎಂಬ ಬಗ್ಗೆ  ಮಾಹಿತಿ ನೀಡಿಲ್ಲ. ಆದರೆ, ಮಾಸ್ಕೊ ಒಬ್ಲಾಸ್ಟ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಸಚಿವಾಲಯ ಹೇಳಿದೆ.‌ 

ADVERTISEMENT

ಸೋಮವಾರವಷ್ಟೇ ಎರಡು ಡ್ರೋನ್‌ಗಳು ಮಾಸ್ಕೊ ಮೇಲೆ ದಾಳಿ ನಡೆಸಿದ್ದವು. ಅವುಗಳಲ್ಲಿ ಒಂದು ರಷ್ಯಾ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯ ಬಳಿ ದಾಳಿ ನಡೆಸಿದರೆ, ಮತ್ತೊಂದು ದಕ್ಷಿಣ ಮಾಸ್ಕೊದಲ್ಲಿರುವ ಕಚೇರಿಯೊಂದಕ್ಕೆ ಅಪ್ಪಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.