ADVERTISEMENT

ಶಸ್ತ್ರಾಸ್ತ್ರಕ್ಕೆ ಕಡಿವಾಣ: ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧ ಎಂದ ರಷ್ಯಾ

ರಾಯಿಟರ್ಸ್
Published 12 ಮಾರ್ಚ್ 2022, 11:11 IST
Last Updated 12 ಮಾರ್ಚ್ 2022, 11:11 IST
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್   

ಮಾಸ್ಕೊ: ‘ಅಮೆರಿಕ ಒಪ್ಪುವುದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕುವ ಕುರಿತು ಮಾತುಕತೆಗೆ ಆ ದೇಶದ ಜತೆ ಮಾತುಕತೆಗೆ ಸಿದ್ಧ’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸೆರ್ಗಿ ರ‍್ಯಾಬ್‌ಕೋವ್ ಶನಿವಾರ ಹೇಳಿದ್ದಾರೆ.

‘ಶಸ್ತ್ರಾಸ್ತ್ರಗಳ ಕಡಿವಾಣ ಹಾಕುವ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ರಷ್ಯಾ ನಿರಂತರ ಸಂಪರ್ಕದಲ್ಲಿವೆ. ಆದರೆ ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸಲು ಅಮೆರಿಕ ಸಿದ್ಧವಿರುವಂತೆ ಕಾಣುತ್ತಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.