ADVERTISEMENT

ರಷ್ಯಾ: ಉಕ್ರೇನ್‌ನ ಒಂಬತ್ತು ಸಂಸ್ಥೆಗಳ ಮೇಲೆ ಆರ್ಥಿಕ ನಿರ್ಬಂಧ

ರಾಯಿಟರ್ಸ್
Published 13 ಫೆಬ್ರುವರಿ 2021, 10:59 IST
Last Updated 13 ಫೆಬ್ರುವರಿ 2021, 10:59 IST
ರಷ್ಯಾ ಧ್ವಜ
ರಷ್ಯಾ ಧ್ವಜ   

ಮಾಸ್ಕೊ: ರಷ್ಯಾವು ಉಕ್ರೇನ್‌ನಒಂಬತ್ತು ಸಂಸ್ಥೆಗಳ ಮೇಲೆ ಆರ್ಥಿಕ ನಿರ್ಬಂಧ ಹೇರಿದೆ.

2014ರಲ್ಲಿ ರಷ್ಯಾವು ಉಕ್ರೇನ್‌ನ ಕ್ರಿಮಿಯಾನ್ ದ್ವೀಪವನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈ ಬಳಿಕ ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ.

ಅಲ್ಲದೆ ‘ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಪರ ಪ್ರತ್ಯೇಕವಾದಿಗಳಿಗೆ ರಷ್ಯಾ ಬೆಂಬಲ ನೀಡಿದೆ’ ಎಂದು ಉಕ್ರೇನ್‌ ಆರೋಪಿಸಿದೆ. ಆದರೆ ರಷ್ಯಾ ಈ ಆರೋಪವನ್ನು ತಳ್ಳಿ ಹಾಕಿದ್ದು, ‘ತಾನು ಉಕ್ರೇನ್‌ನ ಸಂಘರ್ಷದಲ್ಲಿ ಭಾಗಿಯಾಗಿಲ್ಲ’ ಎಂದು ಹೇಳಿದೆ.

ADVERTISEMENT

ಇದರಿಂದಾಗಿ ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ್ದವು.

ಇದೀಗ ರಷ್ಯಾವು ಉಕ್ರೇನ್‌ನ ಹಡಗು ತಯಾರಕ ಸಂಸ್ಥೆ ಕ್ರೇನ್‌ಶಿಪ್, ಡೊನ್ಮಾರ್, ಟ್ರಾನ್ಸ್‌ಶಿಪ್, ಮ್ಯಾಕ್ಸಿಮಾ ಮೆಟಲ್ ಸೇರಿದಂತೆ ಒಟ್ಟು 9 ಸಂಸ್ಥೆಗಳ ಮೇಲೆ ಆರ್ಥಿಕ ನಿರ್ಬಂಧ ಹೇರಿದೆ. ಆದರೆ ಈ ನಿರ್ಬಂಧದ ಕಾರಣವನ್ನು ಮಾತ್ರ ರಷ್ಯಾ ಬಹಿರಂಗಪಡಿಸಿಲ್ಲ. ರಷ್ಯಾ ಈವರೆಗೆ ಉಕ್ರೇನ್‌ನ 84 ಕಂಪೆನಿಗಳ ಮೇಲೆ ನಿರ್ಬಂಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.