ADVERTISEMENT

ತಿಂಗಳಿಗೆ ₹2.38 ಲಕ್ಷ ಪ್ರೋತ್ಸಾಹಧನ: ಯುದ್ಧಕ್ಕಾಗಿ ರಷ್ಯಾ ಸೇನೆಯಿಂದ ನೇಮಕಾತಿ

ರಾಯಿಟರ್ಸ್
Published 18 ಸೆಪ್ಟೆಂಬರ್ 2022, 13:29 IST
Last Updated 18 ಸೆಪ್ಟೆಂಬರ್ 2022, 13:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಮಾಸ್ಕೊ: ಉಕ್ರೇನ್‌ ವಿರುದ್ಧ ಕೈಗೊಂಡಿರುವ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ಯಲ್ಲಿ ಹೋರಾಡಲು ರಷ್ಯಾ ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಿಸಿಕೊಳ್ಳುತ್ತಿದೆ. ಜನರನ್ನು ಆಕರ್ಷಿಸಲು ಮೊಬೈಲ್ ನೇಮಕಾತಿ ಟ್ರಕ್‌ಗಳನ್ನು ಅಲ್ಲಲ್ಲಿ ನಿಯೋಜಿಸಲಾಗುತ್ತಿದೆ. ತಿಂಗಳಿಗೆ $3,000 (₹2,38,951) ಪ್ರೋತ್ಸಾಹಧನ ನೀಡುವುದಾಗಿ ಹೇಳಿದೆ.

‘ಒಪ್ಪಂದದ ಆಧಾರದ ಮೇಲೆ ಮಿಲಿಟರಿ ಸೇವೆ - ನಿಜವಾದ ಮನುಷ್ಯನ ಆಯ್ಕೆ’ ಎಂಬ ಶೀರ್ಷಿಕೆಯ ಕರಪತ್ರಗಳನ್ನು ನೇಮಕಾತಿ ಟ್ರಕ್‌ಗಳ ಮೂಲಕ ಜನರಿಗೆ ವಿತರಿಸಲಾಗುತ್ತಿದೆ.

ADVERTISEMENT

ನೇಮಕಾತಿಯಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ನೇಮಕಾತಿ ಟ್ರಕ್‌ವೊಂದರ ಉಸ್ತುವಾರಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕನಿಷ್ಠ ಪ್ರೌಢಶಾಲಾ ಶಿಕ್ಷಣ ಹೊಂದಿರುವ 18 ರಿಂದ 60 ವರ್ಷ ವಯಸ್ಸಿನ ರಷ್ಯನ್ನರು ಮತ್ತು ವಿದೇಶಿಗರು ನೇಮಕಾತಿಗೆ ಅರ್ಹರು ಎಂದು ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ.

‘ದೇಶಭಕ್ತಿ ಹೊಂದಿರುವ ನಾಗರಿಕರು ವಿಶೇಷ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬಹುದು. ಅವರಿಂದ ಮೂರು ಅಥವಾ ಆರು ತಿಂಗಳ ಒಪ್ಪಂದಕ್ಕೆ ಸಹಿ ಪಡೆಯಲಾಗುತ್ತದೆ’ ಎಂದು ಮೇಜರ್ ಸೆರ್ಗೆಯ್ ಅರ್ದಶೇವ್ ಎಂಬುವವರು ಹೇಳಿದ್ದಾರೆ.

ಕನಿಷ್ಠ ಮಾಸಿಕ ವೇತನವು 160,000 ರೂಬಲ್ಸ್‌ಗಳು (₹2,10,646) ಆಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಸುಮಾರು ಮೂರು ಪಟ್ಟು ಹೆಚ್ಚು.

ರಷ್ಯಾ ಆಗಲಿ, ಉಕ್ರೇನ್ ಆಗಲಿ ಈ ವರೆಗೆ ಯುದ್ಧದಲ್ಲಾದ ನಷ್ಟದ ಬಗ್ಗೆ ಬಹಿರಂಗಪಡಿಸಿಲ್ಲ. ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಎರಡೂ ಕಡೆಗಳಲ್ಲಿ ಹತ್ತಾರು ಸಾವಿರ ಸಂಖ್ಯೆಯ ಸೈನಿಕರು ಮೃತಪಟ್ಟಿರುವುದಾಗಿ ಹೇಳಿವೆ.

ಮಾರ್ಚ್ 25 ರಿಂದ ಮಾಸ್ಕೋ ಅಧಿಕೃತ ಸಾವಿನ ಸಂಖ್ಯೆಯನ್ನು ತಿಳಿಸಿಲ್ಲ. 1,351 ರಷ್ಯಾದ ಸೈನಿಕರು ಮೃತಪಟ್ಟಿರುವುದಾಗಿಯೂ ಮತ್ತು 3,825 ಮಂದಿ ಗಾಯಗೊಂಡಿರುವುದಾಗಿಯೂ ರಷ್ಯಾ ಅಂದು ಹೇಳಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.