ಉಕ್ರೇನ್ ಮೇಲೆ ರಷ್ಯಾ ದಾಳಿ (ಸಾಂದರ್ಭಿಕ ಚಿತ್ರ)
–ರಾಯಿಟರ್ಸ್ ಚಿತ್ರ
ಕೀವ್, ಉಕ್ರೇನ್: ಈಶಾನ್ಯ ಉಕ್ರೇನ್‌ನ ಹಾರ್ಕಿವ್ ಮತ್ತು ಸುಮಿಯಲ್ಲಿ ರಾತ್ರಿಯಿಡಿ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಹಾರ್ಕಿವ್ ನಗರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 26 ಜನರು ಗಾಯಗೊಂಡಿದ್ದಾರೆ ಎಂದು ನಗರ ಮೇಯರ್ ಇಗೊರ್ ಟೆರೆಖೋವ್ ಟೆಲಿಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.
"ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಲಸ್ಟರ್ ಯುದ್ಧಸಾಮಗ್ರಿ ಹಾಗೂ ಖಂಡಾಂತರ ಕ್ಷಿಪಣಿ ಬಳಸಿ ಹಾರ್ಕಿವ್ ಮೇಲೆ ದಾಳಿ ನಡೆಸಲಾಗಿದೆ. ಹೀಗಾಗಿ ಭಾರಿ ಪ್ರಮಾಣದ ಹಾನಿಯಾಗಿದೆ. 15 ಅಪಾರ್ಟ್‌ಮೆಂಟ್ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.
ಜನನಿಬಿದ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹಾರ್ಕಿವ್ ಪ್ರಾದೇಶಿಕ ಗವರ್ನರ್ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ.
ರಷ್ಯಾದ ಗಡಿಯ ಸಮೀಪವಿರುವ ಸುಮಿಯಲ್ಲಿ, ಇರಾನಿನ ನಿರ್ಮಿತ ಶಹೀದ್ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲಾಗಿದ್ದು, ಓರ್ವ ಸಾವಿಗೀಡಾಗಿ, ಇನ್ನೊಬ್ಬರು ಗಾಯಗೊಂಡಿದ್ದರು ಎಂದು ಪ್ರಾದೇಶಿಕ ಮಿಲಿಟರಿ ಆಡಳಿತ ತಿಳಿಸಿದೆ.
ನಗರದ ನಾಗರಿಕ ಮೂಲಸೌಕರ್ಯ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಯುದ್ಧಾರಂಭವಾಗಿ ಮೂರು ವರ್ಷಕ್ಕೂ ಹೆಚ್ಚಾಗಿದೆ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದರೂ ವೈಮಾನಿಕ ದಾಳಿಗಳು ಹೆಚ್ಚಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.