ADVERTISEMENT

ರಷ್ಯಾದ 8 ಯೋಧರನ್ನು ಕೊಂದ ಉಕ್ರೇನ್‌ ಅಜ್ಜಿ!  

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:45 IST
Last Updated 21 ಮಾರ್ಚ್ 2022, 19:45 IST
ರಷ್ಯಾ ಅತಿಕ್ರಮಣದ ವಿರುದ್ಧ ಹೋರಾಟ ನಡೆಸಲು ತರಬೇತಿ ಪಡೆಯುತ್ತಿರುವ ಉಕ್ರೇನ್ ಸೈನಿಕರು –ಎಪಿ/ಪಿಟಿಐ ಚಿತ್ರ
ರಷ್ಯಾ ಅತಿಕ್ರಮಣದ ವಿರುದ್ಧ ಹೋರಾಟ ನಡೆಸಲು ತರಬೇತಿ ಪಡೆಯುತ್ತಿರುವ ಉಕ್ರೇನ್ ಸೈನಿಕರು –ಎಪಿ/ಪಿಟಿಐ ಚಿತ್ರ   

ಕೀವ್‌: ಉಕ್ರೇನ್‌ ಮೇಲೆ ದಂಡೆತ್ತಿ ಹೋಗಿರುವ ರಷ್ಯಾದ ಪಡೆಗಳ 8 ಯೋಧರನ್ನು ಉಕ್ರೇನಿನ ದೇಶಪ್ರೇಮಿ ಅಜ್ಜಿಯೊಬ್ಬಳು ಕೊಂದುಬಿಟ್ಟಿದ್ದಾಳೆ!

ಇದು ನಿಜನಾ? ಅಜ್ಜಿಯಿಂದ ಅಷ್ಟು ಯೋಧರನ್ನು ಕೊಲ್ಲಲು ಸಾಧ್ಯವಾಗಿದೆಯಾ? ಎನ್ನುವ ಪ್ರಶ್ನೆಗಳು ಮತ್ತು ಅಚ್ಚರಿ ಮೂಡುವುದು ಸಹಜ. ಆದರೆ, ಉಕ್ರೇನಿನಭ್ರಷ್ಟಾಚಾರ ವಿರೋಧಿ ಕ್ರಿಯಾ ಕೇಂದ್ರದ (ಆ್ಯಂಟಿ ಕರಪ್ಶನ್‌ ಆ್ಯಕ್ಷನ್‌ ಸೆಂಟರ್) ಕಾರ್ಯನಿರ್ವಾಹಕ ನಿರ್ದೇಶಕಿ ದರಿಯಾ ಕಲೆನ್ಯೂಕ್‌ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ನೋಡಿದರೆ ಇದು ನಿಜ ಎನಿಸುತ್ತದೆ.

ಉಕ್ರೇನ್‌ ಆಕ್ರಮಣಕ್ಕೆ ದಂಡೆತ್ತಿ ಹೋಗಿರುವ ರಷ್ಯಾ ಪಡೆಗಳಿಗೆ ಈಗಾಗಲೇ ಇಂಧನ ಮತ್ತು ಆಹಾರದ ಕೊರತೆ ಎದುರಾಗಿದೆ. ಯೋಧರು ಉಕ್ರೇನ್‌ ನೆಲದಲ್ಲಿ ಹನಿ ನೀರು ಮತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ.ಉಕ್ರೇನ್‌ ಸೈನಿಕರ ತೀವ್ರ ಪ್ರತಿರೋಧ, ಗೆರಿಲ್ಲಾ ಮಾದರಿ ದಾಳಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ.

ADVERTISEMENT

‘ರಷ್ಯಾದ ಆಕ್ರಮಣಕಾರರು ಉಕ್ರೇನ್‌ಗೆ ನುಗ್ಗಿದರೆ ಉಕ್ರೇನಿಗರು ಬ್ರೆಡ್‌ ಮತ್ತು ಉಪ್ಪು ನೀಡಿ ಸ್ವಾಗತಿಸುತ್ತಾರೆ ಎಂದು ಭಾವಿಸಿದ್ದರು ಎನಿಸುತ್ತದೆ. ಆದರೆ, ಉಕ್ರೇನಿನ ಅಜ್ಜಿಯೊಬ್ಬರು ಮನೆಯಲ್ಲಿ ತಯಾರಿಸಿದ ಕೇಕ್‌ ನೀಡಿ ರಷ್ಯಾದ ಆಕ್ರಮಣಕಾರರನ್ನು ಸ್ವಾಗತಿಸಿದ್ದಾರೆ. ಅದೂ ಅಂತಿಂತ ಕೇಕ್‌ ಅಲ್ಲ, ವಿಷ ಮಿಶ್ರಿತ ಕೇಕ್‌. ಪಾಪ,ಹಸಿದ ಆಕ್ರಮಣಕಾರರಲ್ಲಿ ಈ ಕೇಕ್‌ ತಿಂದ 8 ಮಂದಿ ಜೀವ ಬಿಟ್ಟಿದ್ದಾರೆ’ ಎಂದುದರಿಯಾ ಕಲೆನ್ಯೂಕ್‌ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಸುಮಾರು 5 ಸಾವಿರ ಮಂದಿ ರಿಟ್ವೀಟ್‌ ಮಾಡಿದ್ದರೆ, ಸುಮಾರು 25 ಸಾವಿರ ಜನರು ಲೈಕ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.