ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಆಕ್ರೋಶ

ಅಮೆರಿಕ, ಪಾಶ್ಚಿಮಾತ್ಯ ದೇಶಗಳ ಕಿಡಿನುಡಿ

ಏಜೆನ್ಸೀಸ್
Published 18 ಮಾರ್ಚ್ 2022, 21:47 IST
Last Updated 18 ಮಾರ್ಚ್ 2022, 21:47 IST

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಳ್ಳು ಮಾಹಿತಿ ಮತ್ತು ತಪ್ಪು ಹಾಗೂ ಅಸಂಬದ್ಧ ಮಾಹಿತಿಗಳನ್ನು ಪಸರಿಸಿದೆ ಎಂದು ಆರೋಪಿಸಿ ಉಕ್ರೇನ್ ಮೇಲೆ ದಾಳಿ ಎಸಗಿದ ರಷ್ಯಾದ ವಿರುದ್ಧ ಅಮೆರಿಕ ಹಾಗೂ 6 ಪಾಶ್ಚಿಮಾತ್ಯ ದೇಶಗಳು ವಾಗ್ದಾಳಿ ನಡೆಸಿವೆ.

ಉಕ್ರೇನ್‌ನಲ್ಲಿ ಅಮೆರಿಕ ಜೈವಿಕ ಯುದ್ಧದ ಪ್ರಯೋಗಾಲಯಗಳನ್ನು ಹೊಂದಿದೆ ಎಂಬ ರಷ್ಯಾದ ಆರೋಪವು ಶುದ್ಧ ಸುಳ್ಳು ಎಂದು ಅಮೆರಿಕ ಹೇಳಿದೆ. ಜತೆಗೆ ಇಂಥ ಸುಳ್ಳುಗಳನ್ನು ಹಬ್ಬಿಸುವ ಕುರಿತಾಗಿ ರಷ್ಯಾಕ್ಕೆ ಕಟು ಎಚ್ಚರಿಕೆ ನೀಡಿದೆ.

ಶುಕ್ರವಾರ ಮಾನವೀಯ ನೆಲೆಯಲ್ಲಿ ಉಕ್ರೇನಿಗಳಿಗೆ ಪರಿಹಾರ ಕುರಿತಾದ ರಷ್ಯಾದ ನಿಲುವಳಿ ಮೇಲೆ ಮತದಾನ ನಡೆಯಬೇಕಿತ್ತು. ಆದರೆ, ಜೈವಿಕ ಯುದ್ಧದ ಚಟುವಟಿಕೆಗಳಲ್ಲಿ ಅಮೆರಿಕ ಭಾಗಿಯಾಗಿದೆ ಎಂದು ರಷ್ಯಾ ಆರೋಪ ಮಾಡಿತು.

ADVERTISEMENT

ಆದರೆ ಉಕ್ರೇನ್‌ನಲ್ಲಿ ಅಥವಾ ರಷ್ಯಾದ ಗಡಿ ಸೇರಿದಂತೆ ಯಾವುದೇ ಭಾಗದಲ್ಲಿ ಯಾವುದೇ ಜೈವಿಕ ಶಸ್ತಾಸ್ತ್ರಗಳ ಪ್ರಯೋಗಾಲಯಗಳಿಲ್ಲ. ರಷ್ಯಾದ ಈ ಸುಳ್ಳು ಕಥೆಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಉಕ್ರೇನ್ ಮೇಲೆ ರಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಲು ಯೋಜಿಸುವ ಸಾಧ್ಯತೆಯಿದೆ ಎದು ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.