ADVERTISEMENT

ಉಕ್ರೇನ್‌ ಮೇಲೆ ರಷ್ಯಾ ದಾಳಿ: 20 ಮಂದಿಗೆ ಗಾಯ

ಏಜೆನ್ಸೀಸ್
Published 10 ಅಕ್ಟೋಬರ್ 2025, 13:11 IST
Last Updated 10 ಅಕ್ಟೋಬರ್ 2025, 13:11 IST
<div class="paragraphs"><p>ರಷ್ಯಾ ದಾಳಿಯಿಂದ ಶುಕ್ರವಾರ ಇಸ್ರೇಲ್‌ ರಾಜಧಾನಿ ಕೀವ್‌ನಲ್ಲಿ ಕಟ್ಟಡ ಹೊತ್ತಿ ಉರಿದಿರುವುದು</p></div>

ರಷ್ಯಾ ದಾಳಿಯಿಂದ ಶುಕ್ರವಾರ ಇಸ್ರೇಲ್‌ ರಾಜಧಾನಿ ಕೀವ್‌ನಲ್ಲಿ ಕಟ್ಟಡ ಹೊತ್ತಿ ಉರಿದಿರುವುದು

   

ಎಎಫ್‌ಪಿ ಚಿತ್ರ

ಕೀವ್‌ : ಉಕ್ರೇನ್‌ ಮೇಲೆ ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಬಳಸಿ ರಷ್ಯಾ ನಡೆಸಿದ ವಾಯುದಾಳಿಯಿಂದಾಗಿ ರಾಜಧಾನಿ ಕೀವ್‌ನಲ್ಲಿ ಶುಕ್ರವಾರ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ.

ADVERTISEMENT

ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಮತ್ತು ದೇಶದಾದ್ಯಂತ ಕಗ್ಗತ್ತಲು ಆವರಿಸಿದೆ. ದೇಶದ ಆಗ್ನೇಯ ಭಾಗದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮಗುವೊಂದು ಸಾವಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೀವ್‌ನ 17 ಅಂತಸ್ತಿನ ಅಪಾರ್ಟ್‌ಮೆಂಟ್‌ನ 6 ಮತ್ತು 7ನೇ ಮಹಡಿಯಲ್ಲಿ ಬೆಂಕಿ ಆವರಿಸಿತ್ತು. ರಕ್ಷಣಾ ತಂಡ 20 ಮಂದಿಯನ್ನು ಹೊರಗೆ ಕರೆತಂದಿದ್ದು, ಚಿಕಿತ್ಸೆ ಕೊಡಿಸಲಾಗಿದೆ.

ನಾಗರಿಕರು ಮತ್ತು ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ. 

ಹಲವು ಉಷ್ಣ ವಿದ್ಯುತ್‌ ಘಟಕಗಳಿಗೆ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್ ಇಂಧನ ಪೂರೈಕೆ ಸಂಸ್ಥೆ ಡಿಟಿಇಕೆ ತಿಳಿಸಿದೆ.

465 ಡ್ರೋನ್‌, 32 ಕ್ಷಿಪಣಿಗಳನ್ನು ಬಳಸಿ ರಷ್ಯಾ ಬಾಂಬ್‌ ದಾಳಿ ನಡೆಸಿತ್ತು. 405 ಡ್ರೋನ್‌ ಮತ್ತು 15 ಕ್ಷಿಪಣಿಗಳನ್ನು ವಾಯುದಾಳಿ ಮೂಲಕ ವಿಫಲಗೊಳಿಸಲಾಯಿತು ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.