ರಷ್ಯಾದ ಡ್ರೋನ್ ದಾಳಿಯಿಂದ ಹಾನಿಗೀಡಾಗಿರುವ ಉಕ್ರೇನ್‌ನ ಕಟ್ಟಡ
ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ಧ ಕೈದಿಗಳನ್ನು ಶನಿವಾರ ವಿನಿಮಯ ಮಾಡಿಕೊಂಡವು. ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಡದಿದ್ದರೂ, ಪರಸ್ಪರ ಸಹಕಾರದ ನಿಲುವಾಗಿ ಯುದ್ಧ ಕೈದಿಗಳ ವಿನಿಮಯ ನಡೆದಿದೆ.
ಶನಿವಾರ ತಲಾ 307 ಕೈದಿಗಳ ವಿನಿಮಯ ನಡೆದಿದ್ದರೆ, ಶುಕ್ರವಾರ ತಲಾ 390 ಯೋಧರು ಹಾಗೂ ನಾಗರಿಕರ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಯುದ್ಧ ಕೈದಿಗಳ ವಿನಿಮಯದ ಸುದ್ದಿಯು ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ರಷ್ಯಾವು ಕೀವ್ ಮೇಲೆ ಬೃಹತ್ ಪ್ರಮಾಣದಲ್ಲಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 15 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ತಾಂಬುಲ್‌ನಲ್ಲಿ ನಡೆದ ಮಾತುಕತೆಯಂತೆ ಎರಡೂ ರಾಷ್ಟ್ರಗಳು ತಲಾ 1 ಸಾವಿರ ಯುದ್ಧ ಕೈದಿಗಳ ವಿನಿಮಯ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ.
ರಷ್ಯಾವು ಶುಕ್ರವಾರ ರಾತ್ರಿ ಉಕ್ರೇನ್ ಮೇಲೆ 14 ಕ್ಷಿಪಣಿಗಳು ಹಾಗೂ 250 ಡ್ರೋನ್‌ಗಳನ್ನು ಬಳಸಿಕೊಂಡು ದಾಳಿ ನಡೆಸಿದೆ.
ಉಕ್ರೇನ್ ಪಡೆಗಳು ರಷ್ಯಾದ 6 ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು, 245 ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.