ADVERTISEMENT

ಉಕ್ರೇನ್‌ ಡ್ರೋನ್‌: ಮಾಸ್ಕೋದ ನಾಲ್ಕು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

ಪಿಟಿಐ
Published 22 ಫೆಬ್ರುವರಿ 2026, 20:19 IST
Last Updated 22 ಫೆಬ್ರುವರಿ 2026, 20:19 IST
   

ಮಾಸ್ಕೊ: ಉಕ್ರೇನ್‌ ಹಾರಿಸಿದ 11 ಡ್ರೋನ್‌ಗಳನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿದ ನಂತರ ರಷ್ಯಾ ರಾಜಧಾನಿ ಮಾಸ್ಕೊದ ನಾಲ್ಕೂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. 

ದೊಮೊಜೆದೊವ, ವ್ನುಕೊವೊ, ಝುಕೊವ್‌ಸ್ಕಿ ಹಾಗೂ ಶೆರೆಮೆತ್ಯೆವೊ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ನಾಗರಿಕ ವಿಮಾನ ಸಂಸ್ಥೆ ರೊಸಾವಿಟಾಟ್ಸಿಯಾ ಭಾನುವಾರ ತಿಳಿಸಿತು. 

ಕೇವಲ ಒಂದು ತಾಸಿನ ಅವಧಿಯಲ್ಲಿ ಒಟ್ಟು 11 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನ ಸಂಚಾರ ರದ್ದುಪಡಿಸಲಾಗಿದೆ ಎಂದು ಮೇಯರ್ ಸರ್ಜಿ ಸೋಬ್ಯಾನಿನ್ ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.