
ಮಾಸ್ಕೋ: ಅಮೆರಿಕ ವಶಪಡಿಸಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್ ಇದ್ದ ಹಡಗಿನಲ್ಲಿ ಒಬ್ಬ ಭಾರತೀಯ ಸಿಬ್ಬಂದಿಯೂ ಇದ್ದು, ಸಿಬ್ಬಂದಿಯ ಜತೆಗೆ ಮಾನವೀಯವಾಗಿ ವರ್ತಿಸುವಂತೆ ರಷ್ಯಾ ಅಮೆರಿಕವನ್ನು ಆಗ್ರಹಿಸಿದೆ.
ಅಟ್ಲಾಂಟಿಕಾದಲ್ಲಿ ಬುಧವಾರ ಬೆಲ್ಲಾ–1 ಹೆಸರಿನ ರಷ್ಯಾ ಧ್ವಜವಿದ್ದ ಹಡಗನ್ನು ಅಮೆರಿಕ ವಶಪಡಿಸಿಕೊಂಡಿದೆ. ಈ ಬಗ್ಗೆ ರಷ್ಯಾ ಕಳವಳ ವ್ಯಕ್ತಪಡಿಸಿ, ಸಾಗರ ಸಂಚಾರ ಸ್ವಾತಂತ್ರ್ಯದ ಬಗೆಗಿರುವ ಅಂತರರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿ ಅಮೆರಿಕ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಜತೆಗೆ ಹಡಗಿನಲ್ಲಿ ಮೂವರು ರಷ್ಯಾ ಸಿಬ್ಬಂದಿ, ಒಬ್ಬ ಭಾರತೀಯ ಸಿಬ್ಬಂದಿ, ಜಾರ್ಜಿಯಾ ಹಾಗೂ ಉಕ್ರೇನ್ ಮೂಲದ ಸಿಬ್ಬಂದಿ ಇರುವ ಬಗ್ಗೆಯೂ ರಷ್ಯಾ ಕಳವಳ ವ್ಯಕ್ತಪಡಿಸಿದೆ. ಸಿಬ್ಬಂದಿಯ ಹಕ್ಕು ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಮಾನವೀಯ ನೆಲೆಗಟ್ಟಿನಲ್ಲಿ ಅವರೊಂದಿಗೆ ವರ್ತಿಸಿ, ಸಿಬ್ಬಂದಿ ತಮ್ಮ ತಾಯಿ ನಾಡಿಗೆ ಹಿಂದಿರುಗಲು ಯಾವುದೇ ಅಡೆತಡೆ ಉಂಟು ಮಾಡಬಾರದೆಂದೂ ರಷ್ಯಾದ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.
ತೈಲದ ದುರಾಸೆ (ವೆನೆಜುವೆಲಾ ವರದಿ): ‘ಅಮೆರಿಕ ಅಧ್ಯಕ್ಷರು ಆರೋಪಿಸಿರುವಂತೆ ಮಾದಕದ್ರವ್ಯ ಹಾವಳಿಯಾಗಲೀ, ಪ್ರಜಾಪ್ರಭುತ್ವದ ಅಧಃಪತನವಾಗಲೀ ನಮ್ಮ ದೇಶದಲ್ಲಿ ಇಲ್ಲ. ಅವರು ತೈಲದ ಮೇಲಿನ ದುರಾಸೆಯಿಂದ ಇಷ್ಟೆಲ್ಲ ಒತ್ತಡ ಹೇರುತ್ತಿದ್ದಾರೆ’ ಎಂದು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಸ್ಥಳೀಯ ವಿಟಿವಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.