ಯಾರೋವಾ (ಉಕ್ರೇನ್): ಪೂರ್ವ ಉಕ್ರೇನ್‌ನ ಗ್ರಾಮವೊಂದರ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದ್ದು, 24 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆ. 9ರ ಬೆಳಿಗ್ಗೆ ಪಿಂಚಣಿ ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 24 ಜನ ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ತುರ್ತು ಸೇವಾ ಘಟಕ ತಿಳಿಸಿದೆ. ಮೃತರೆಲ್ಲರೂ ವೃದ್ಧರು ಎಂದು ಪ್ರಾದೇಶಿಕ ಗವರ್ನರ್ ವಾಡಿಮ್ ಫಿಲಾಶ್ಕಿನ್ ಹೇಳಿದ್ದಾರೆ.
ಉಕ್ರೇನ್ ಭದ್ರಕೋಟೆಯಾದ ಸ್ಲೋವಿಯನ್ಸ್ಕ್ ನಗರದಿಂದ ಸುಮಾರು 15 ಮೈಲುಗಳ (24 ಕಿ.ಮೀ) ದೂರದಲ್ಲಿರುವ ಯಾರೋವಾ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಪಿಂಚಣಿ ಪಡೆಯುತ್ತಿದ್ದ ಜನರ ಮೇಲೆ ದಾಳಿ ನಡೆದಿದೆ. ಇದು ಅತ್ಯಂತ ಕ್ರೂರ ಘಟನೆ ಎಂದ ಅವರು, ರಷ್ಯಾದ ಮೇಲೆ ಆರ್ಥಿಕ ದಿಗ್ಭಂಧನ ವಿಧಿಸುವಂತೆ ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.
ಜಗತ್ತು ಮೌನವಾಗಿರಬಾರದು. ಅಮೆರಿಕ, ಯುರೋಪ್ ಮತ್ತು ಜಿ20ಯಿಂದ ಪ್ರತಿಕ್ರಿಯೆ ಬೇಕು ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ದಾಳಿಯ ಬಗ್ಗೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.