ADVERTISEMENT

ಉಕ್ರೇನ್ ಮೇಲಿನ ದಾಳಿಯು ಭದ್ರತೆ, ಜಾಗತಿಕ ಶಾಂತಿ ಮೇಲಿನ ದಾಳಿಯೇ ಆಗಿದೆ: ಬೈಡನ್

ಪಿಟಿಐ
Published 5 ಮಾರ್ಚ್ 2022, 11:22 IST
Last Updated 5 ಮಾರ್ಚ್ 2022, 11:22 IST
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಫಿನ್ಲೆಂಡ್‌ ಅಧ್ಯಕ್ಷ ಸೌಲಿ ನಿನಿಸ್ಟೋ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು  –ಎಎಫ್‌ಪಿ ಚಿತ್ರ
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಫಿನ್ಲೆಂಡ್‌ ಅಧ್ಯಕ್ಷ ಸೌಲಿ ನಿನಿಸ್ಟೋ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು  –ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಉಕ್ರೇನ್ ಮೇಲಿನ ರಷ್ಯಾದ ಭೀಕರ ದಾಳಿಯು ಕೇವಲ ಆ ದೇಶವೊಂದರ ಮೇಲಿನ ದಾಳಿಯಾಗಿ ಸೀಮಿತವಾಗಿಲ್ಲ. ಬದಲಾಗಿ ಯರೋಪ್ ಭದ್ರತೆ ಮತ್ತು ಜಾಗತಿಕ ಶಾಂತಿ ಮೇಲಿನ ದಾಳಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಪಾದಿಸಿದ್ದಾರೆ.

ಪೂರ್ವ ಯುರೋಪ್ ರಾಷ್ಟ್ರಗಳಲ್ಲಿ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ನ್ಯಾಟೋ ಸದಸ್ಯ ರಾಷ್ಟ್ರಗಳ ಭದ್ರತೆಗೆ ಅಮೆರಿಕ ಬದ್ಧವಾಗಿದೆ ಎಂದು ಹೇಳಿದ್ದಾರೆ. ತನ್ಮೂಲಕ ಈವರೆಗೆ ರಷ್ಯಾದ ವಿರುದ್ಧ ತಾನು ಯುದ್ಧ ಮಾಡುವುದಿಲ್ಲ. ನ್ಯಾಟೋ ಪಡೆಗಳನ್ನು ಉಕ್ರೇನ್ ಗೆ ಕಳುಹಿಸುವುದಿಲ್ಲ ಎಂದು ಹೇಳುತ್ತಾ ಬಂದಿದ್ದ ಅಮೆರಿಕ, ಇದೇ ಮೊದಲ ಬಾರಿಗೆ ಅಗತ್ಯ ಎದುರಾದರೆ ಯುದ್ಧಕ್ಕೆ ಇಳಿಯುವ ಸುಳಿವು ನೀಡಿದೆ.

ಶ್ವೇತಭವನದಲ್ಲಿ ಫಿನ್ ಲೆಂಡ್ ಅಧ್ಯಕ್ಷ ಸಾಲಿ ನಿನಿಸ್ಟೋ ಅವರ ಜತೆ ದ್ವಿಪಕ್ಷೀಯ ಸಭೆ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ಉಕ್ರೇನ್ ಮೇಲಿನ ರಷ್ಯಾದ ಅಪ್ರಚೋದಿತ ಮತ್ತು ಸಮರ್ಥಿಸಲಾಗದ ದಾಳಿಗೆ ರಷ್ಯಾವನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಗುಡುಗಿದರು.

ADVERTISEMENT

ನ್ಯಾಟೊ ರಾಷ್ಟ್ರಗಳ ಭದ್ರತೆಗಾಗಿ ಯುರೋಪ್‌ನಲ್ಲಿ ಹೆಚ್ಚುವರಿಯಾಗಿ ಅಮೆರಿಕದ 7,000 ಸೇನಾ ಯೋಧರನ್ನು ನಿಯೋಜಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ತಿಳಿಸಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪೋಲೆಂಡ್‌ನಲ್ಲಿ 9,000 ಯೋಧರು ಹಾಗೂ 4,700 ಹೆಚ್ಚುವರಿಯಾಗಿ ಅಮೆರಿಕದ ಸೈನಿಕರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.