ADVERTISEMENT

ಉಕ್ರೇನ್‌ ವಿವಿಧೆಡೆ ಡ್ರೋನ್‌ ದಾಳಿ

ಏಜೆನ್ಸೀಸ್
Published 19 ಮಾರ್ಚ್ 2025, 14:29 IST
Last Updated 19 ಮಾರ್ಚ್ 2025, 14:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ (ಸಂಗ್ರಹ ಚಿತ್ರ)&nbsp;</p></div>

ಪ್ರಾತಿನಿಧಿಕ ಚಿತ್ರ (ಸಂಗ್ರಹ ಚಿತ್ರ) 

   

ಕೀವ್: ಕದನ ವಿರಾಮ ಪ್ರಸ್ತಾವವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿರಸ್ಕರಿಸಿದ ಹಿಂದೆಯೇ ರಷ್ಯಾದ ಸೇನೆಯು ಉಕ್ರೇನ್‌ನ ವಿವಿಧ ನಗರಗಳ ಮೇಲೆ ಸರಣಿ ಡ್ರೋನ್‌ ದಾಳಿ ನಡೆಸಿದೆ.

ಡ್ರೋನ್‌ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆಸ್ಪತ್ರೆ ಜಖಂಗೊಂಡಿದೆ. ‘ಇಂಧನ ಮೂಲಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ. 

ADVERTISEMENT

30 ದಿನ ಕದನವಿರಾಮ ಘೋಷಿಸಬೇಕು ಎಂಬ ಪ್ರಸ್ತಾವವನ್ನು ಪುಟಿನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಜೊತೆಗೆ ನಡೆಸಿದ ಮಾತುಕತೆ ವೇಳೆ ತಳ್ಳಿಹಾಕಿದ್ದರು.

ದಾಳಿ ನಿಲ್ಲಿಸಲು ರಷ್ಯಾ ನಿರಾಕರಿಸಿದೆ. ಯುದ್ಧ ಇನ್ನಷ್ಟು ಕಾಲ ಮುಂದುವರಿಯುವುದನ್ನು ತಡೆಯಲು ರಷ್ಯಾ ಮೇಲೆ ಒತ್ತಡ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.

ಉಕ್ರೇನ್‌ನ ಸುಮಿಯಲ್ಲಿರುವ ಆಸ್ಪತ್ರೆ, ಕೀವ್, ಚೆರ್ನಿವ್, ಪೊಲ್ಟಾವಾ, ಹಾರ್ಕಿವ್, ಕಿರೊವ್‌ರಡ್ ನಗರಗಳನ್ನು ಗುರಿಯಾಗಿಸಿ ಈಗ ಡ್ರೋನ್‌ ದಾಳಿ ನಡೆದಿದೆ.

ಈ ಮಧ್ಯೆ, ರಷ್ಯಾ ಸೇನೆಯು ಉಕ್ರೇನ್‌ ಪ್ರಯೋಗಿಸಿದ್ದ 57 ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.