ADVERTISEMENT

ರಷ್ಯಾ ದಾಳಿಯಲ್ಲಿ ಮೂವರ ಮಕ್ಕಳು ಸೇರಿ 198 ಉಕ್ರೇನ್‌ ಪ್ರಜೆಗಳ ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2022, 10:45 IST
Last Updated 26 ಫೆಬ್ರುವರಿ 2022, 10:45 IST
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ದೃಶ್ಯ
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ದೃಶ್ಯ   

ಕೀವ್‌: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 198 ಪ್ರಜೆಗಳು ಹತ್ಯೆಯಾಗಿದ್ದಾರೆ ಎಂದು ಇಂಟರ್‌ಫ್ಯಾಕ್ಸ್‌ ಸುದ್ದಿಸಂಸ್ಥೆಯ ಮಾಹಿತಿಯನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

ಮೃತಪಟ್ಟ ಉಕ್ರೇನ್‌ ಪ್ರಜೆಗಳಲ್ಲಿ ಯೋಧರು, ನಾಗರಿಕರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಉಕ್ರೇನ್‌ ಆರೋಗ್ಯ ಸಚಿವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.

ಈ ದಾಳಿಯಲ್ಲಿ 33 ಮಕ್ಕಳು ಸೇರಿದಂತೆ 1,115 ಜನರು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಉಕ್ರೇನ್‌ನ ನಾಗರಿಕ ಸ್ವಯಂಸೇವಕರು ರಷ್ಯಾದ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ರಷ್ಯಾದ ಟ್ಯಾಂಕ್‌ಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ.

ಉಕ್ರೇನ್‌ ರಾಜಧಾನಿ ಕೀವ್‌ ಸೇರಿದಂತೆ ಹಲವು ನಗರಗಳಲ್ಲಿ ರಷ್ಯಾದ ದಾಳಿ ಮುಂದುವರೆದಿದ್ದು, ಸಾವುನೋವುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.