ADVERTISEMENT

ಹಿಂದು ಸಂಪ್ರದಾಯದಂತೆ ಭಾರತದಲ್ಲಿ ಮದುವೆಯಾದ ರಷ್ಯಾ ಯುವಕ ಉಕ್ರೇನ್ ಯುವತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2022, 7:40 IST
Last Updated 4 ಆಗಸ್ಟ್ 2022, 7:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧರ್ಮಶಾಲಾ: ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಸಂಪೂರ್ಣ ಹಳಸಿ ಹೋಗಿವೆ. ಎರಡೂ ದೇಶದ ಪ್ರಜೆಗಳು ಪರಸ್ಪರ ವೈರಿಗಳಂತೆ ಬಿಂಬಿತವಾಗಿದ್ದಾರೆ.

ಆದರೆ, ರಷ್ಯಾ ಯುವಕ ಹಾಗೂ ಉಕ್ರೇನ್ ಯುವತಿ ಮದುವೆಯಾಗಿ ಪ್ರೀತಿಗೆ ವೈರತ್ವ ಇಲ್ಲ ಎಂಬುದನ್ನೂ ಸಾರಿದ್ದಾರೆ. ವಿಶೇಷವೆಂದರೆ ಈ ಜೋಡಿ ಭಾರತದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ಮೂಲದ ಸರ್ಗಿ ನೊವೊಕಿವಾ ಅವರು ಉಕ್ರೇನ್‌ನ ತಮ್ಮ ಗೆಳತಿ ಎಲಾನ್ ಬ್ರಾಮೊಕಾ ಅವರನ್ನು ಹಿಮಾಚಲ ಪ್ರದೇಶದ ಧರ್ಮಶಾಲಾದ ಬಳಿ ಇರುವಖರೋಟಾದ ‘ದಿವ್ಯ ಆಶ್ರಮ’ದಲ್ಲಿ ಕಳೆದ ಮಂಗಳವಾರ ಹಿಂದುಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಎಲಾನ್ ಹಾಗೂ ನೊವೊಕಿವಾ ಅವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಕಳೆದ ಫೆಬ್ರವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿದ್ದರಿಂದ ಈ ಜೋಡಿ ತಾಯ್ನಾಡಿಗೆ ತೆರಳಲು ಆಗಿರಲಿಲ್ಲ.

ಮದುವೆಯಲ್ಲಿ ಸ್ಥಳೀಯರು ಕೂಡ ಭಾಗವಹಿಸಿದ್ದರು. ಅಲ್ಲದೇ ದಂಪತಿ ಹಿಂದುಸಂಪ್ರದಾಯದಂತೆ ಉಡುಗೆ ತೊಟ್ಟು ಮದುವೆಯಾಗಿದ್ದು ಗಮನ ಸೆಳೆದಿದೆ.

ದಿವ್ಯ ಆಶ್ರಮದ ವಿನೋದ್ ಶರ್ಮಾ ಅವರ ಮುಂದಾಳತ್ವದಲ್ಲಿ ಈ ಅಪರೂಪದ ಮದುವೆ ನಡೆದಿದೆಎಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.