ADVERTISEMENT

ರಷ್ಯಾದ ಯುದ್ಧ ವಿರೋಧಿಸಿ ಸುದ್ದಿ ಪ್ರಸಾರಕ್ಕೆ ಅಡ್ಡಿ: ಉದ್ಯೋಗಿಗೆ ದಂಡ

ಸರ್ಕಾರಿ ಸ್ವಾಮ್ಯದ ಮಹಿಳಾ ಉದ್ಯೋಗಿಯ ದಿಟ್ಟತನ

ಏಜೆನ್ಸೀಸ್
Published 16 ಮಾರ್ಚ್ 2022, 12:21 IST
Last Updated 16 ಮಾರ್ಚ್ 2022, 12:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ಉಕ್ರೇನ್ ಮೇಲಿನ ದಾಳಿ ವಿರೋಧಿಸಿ ರಷ್ಯಾದ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿಯ ಉದ್ಯೋಗಿಯೊಬ್ಬರು ಲೈವ್ ಸುದ್ದಿ ಪ್ರಸಾರಕ್ಕೆ ಅಡ್ಡಿಪಡಿಸಿದ್ದು, ಅವರಿಗೆ ರಷ್ಯಾದ ನ್ಯಾಯಾಲಯ30,000 ರುಬಲ್ಸ್(₹21,270) ದಂಡ ವಿಧಿಸಿದೆ.

ರಷ್ಯಾದ ಸರ್ಕಾರಿ ಸ್ವಾಮ್ಯದ 'ವಾಹಿನಿ ಒನ್' ಟಿವಿಯಲ್ಲಿ ಸೋಮವಾರ ಸಂಜೆ ಸುದ್ದಿ ಪ್ರಸಾರವಾಗುತ್ತಿತ್ತು. ಈ ವೇಳೆ ಟಿವಿ ಸ್ಟುಡಿಯೊಗೆ ನುಗ್ಗಿದ ಮರಿನಾ ಒವ್‌ಸ್ಯಾನ್ನಿಕೋವಾ ಎಂಬ ಮಹಿಳಾ ಉದ್ಯೋಗಿ 'ಯುದ್ಧ ಬೇಡ' ಮತ್ತು 'ರಷ್ಯಾದವರು ಯುದ್ಧದ ವಿರುದ್ಧ ಇದ್ದಾರೆ' ಎಂಬ ಭಿತ್ತಿಪತ್ರವನ್ನು ಪ್ರದರ್ಶಿಸಿದ್ದಾರೆ.

’ನನ್ನ ತಂದೆ ಉಕ್ರೇನ್ ಮೂಲದವರಾಗಿದ್ದು, ತಾಯಿ ರಷ್ಯಾದವರು. ರಷ್ಯಾದ ಆಕ್ರಮಣಕಾರಿ ನೀತಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಕಾರಣ, ರಷ್ಯಾದ ಪ್ರಜೆಗಳು ಯುದ್ಧ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಬೇಕು’ ಎಂದು ಕರೆ ನೀಡಿದ್ದಾರೆ.

ADVERTISEMENT

ಈಕೆಯ ಧೈರ್ಯವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಕೊಂಡಾಡಿದ್ದಾರೆ. ಆದರೆ, ಸುದ್ದಿ ಪ್ರಸಾರದ ವೇಳೆ ಅಡ್ಡಿಪಡಿಸುವುದು ಗಂಭೀರ ಸ್ವರೂಪದ ಅಪರಾಧ ಎಂದು ರಷ್ಯಾ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.