ADVERTISEMENT

ರಷ್ಯಾ: ಮಿಲಿಟರಿ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಆಸ್ತಿ ಜಪ್ತಿ

ಪಿಟಿಐ
Published 7 ಫೆಬ್ರುವರಿ 2024, 12:38 IST
Last Updated 7 ಫೆಬ್ರುವರಿ 2024, 12:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾಸ್ಕೊ: ದೇಶದ ಮಿಲಿಟರಿಯ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹಬ್ಬಿಸುವ ಅಪರಾಧಿಗಳಿಂದ ಹಣ, ಬೆಲೆಬಾಳುವ ವಸ್ತುಗಳು ಮತ್ತು ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವ ಮಸೂದೆಗೆ ರಷ್ಯಾ ಸಂಸತ್ತಿನ ಮೇಲ್ಮನೆ ಬುಧವಾರ ಅನುಮೋದನೆ ನೀಡಿದೆ.

ಕಳೆದ ವಾರ ಕೆಳಮನೆಯಲ್ಲಿ ಇದಕ್ಕೆ ಅನುಮೋದನೆ ನೀಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಮಸೂದೆಗೆ ಅಂಕಿತ ಹಾಕಿದ ನಂತರ ಇದು ಕಾಯ್ದೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.