ADVERTISEMENT

ರಷ್ಯಾ: ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಸಿದ್ರೆ 5 ವರ್ಷದವರೆಗೆ ಜೈಲು

ಏಜೆನ್ಸೀಸ್
Published 31 ಮಾರ್ಚ್ 2020, 13:11 IST
Last Updated 31 ಮಾರ್ಚ್ 2020, 13:11 IST
ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಲಾಕ್‌ಡೌನ್ (ಎಎಫ್‌ಪಿ ಚಿತ್ರ
ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಲಾಕ್‌ಡೌನ್ (ಎಎಫ್‌ಪಿ ಚಿತ್ರ   

ಮಾಸ್ಕೊ: ಕೊರೊನಾ ವೈರಸ್ (ಕೋವಿಡ್–19) ಕುರಿತು ಸುಳ್ಳು ಸುದ್ದಿ ಹಬ್ಬಿಸುವವರಿಗೆ 5 ವರ್ಷಗಳ ವರೆಗೆ ಜೈಲು ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸುವ ಮಸೂದೆಗೆ ರಷ್ಯಾ ಸಂಸತ್‌ನ ಕೆಳಮನೆಯಲ್ಲಿ ಅನುಮೋದನೆ ದೊರೆತಿದೆ.

ಇದರ ಅಡಿಯಲ್ಲಿ, ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬುವ ಮೂಲಕ ವ್ಯಕ್ತಿಯ ಸಾವಿಗೆ ಕಾರಣವಾದರೆ ಅಂತಹವರಿಗೆ 20 ಲಕ್ಷ ರುಬೆಲ್ಸ್‌ ದಂಡ ಅಥವಾ 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸುಳ್ಳು ಸುದ್ದಿ ಹಬ್ಬುವ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಿದರೆ ಅಂತಹವರಿಗೆ ಮೂರು ವರ್ಷ ಜೈಲು ಅಥವಾ 15 ಲಕ್ಷ ರುಬೆಲ್ಸ್‌ ದಂಡ ವಿಧಿಸಲು ಅವಕಾಶವಿದೆ.

ಕ್ವಾರಂಟೈನ್ ಉಲ್ಲಂಘಿಸುವವರಿಗೆ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ.

ADVERTISEMENT

ಮಸೂದೆಗೆ ಮೇಲ್ಮನೆಯಲ್ಲಿ ಇನ್ನಷ್ಟೇ ಅನುಮೋದನೆ ದೊರೆಯಬೇಕಿದೆ. ನಂತರ ಅಧ್ಯಕ್ಷರು ಸಹಿ ಹಾಕಬೇಕಿದ್ದು, ಬಳಿಕ ಕಾನೂನಾಗಿ ರೂಪುಗೊಳ್ಳಲಿದೆ.

ಅಧಿಕೃತ ಮಾಹಿತಿ ಪ್ರಕಾರ, ರಷ್ಯಾದಲ್ಲಿ ಈವರೆಗೆ 1,836 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.