ADVERTISEMENT

ಉಪಗ್ರಹ ಚಿತ್ರಗಳು: ತಾಲಿಬಾನ್‌ನಿಂದ ತಪ್ಪಿಸಿಕೊಳ್ಳಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಪ್ರವಾಹ!

ಕಾಬೂಲ್: ಅಪ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. 20 ವರ್ಷಗಳ ಬಳಿಕ ಆ ದೇಶವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.ಕಳೆದ ಒಂದು ತಿಂಗಳಿನಿಂದ ಆರಂಭವಾದ ಅದರ ವಿಜಯಯಾತ್ರೆ ಆ.15 ರಂದು ರಾಜಧಾನಿ ಕಾಬೂಲ್‌ ನಗರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಅಂತ್ಯವಾಯಿತು.ಈ ವೇಳೆ ಎರಡು ದಶಕಗಳ ಹಿಂದೆ ತಾಲಿಬಾನ್ ಆಡಳಿತವನ್ನು ಕಂಡು ನೊಂದಿದ್ದ ಜನತೆ ಇದೀಗ ಮತ್ತೆ ತಾಲಿಬಾನ್‌ ಕೈಯಲ್ಲಿ ನಾವು ಸಿಕ್ಕಿಕೊಂಡರೆ ಅಷ್ಟೇ ನಮ್ಮ ಗತಿ ಎಂದು ದೇಶವನ್ನು ತೊರೆಯುತ್ತಿದ್ದಾರೆ.ಆ.15 ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ಓಡೋಡಿ ಬಂದ ಜನ ಸಿಕ್ಕ ಸಿಕ್ಕ ವಿಮಾನಗಳನ್ನು ಹತ್ತಿ ದೇಶ ತೊರೆದು ಹೊರಟಿದ್ದರು. ಈ ವೇಳೆ ಉಂಟಾದ ಜನ ಪ್ರವಾಹ ಜಗತ್ತಿನಾದ್ಯಂತ ಅಚ್ಚರಿ ಮೂಡಿಸಿತ್ತು. ಅಲ್ಲದೇಅಪ್ಘಾನಿಸ್ತಾನದ ಸದ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು.ಅಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ಜನ ಪ್ರವಾಹವನ್ನು ಅಂತರಿಕ್ಷದಲ್ಲಿರುವ ಉಪಗ್ರಹಗಳು ಚಿತ್ರಗಳ ಮುಖೇನ ಸೆರೆ ಹಿಡಿದಿದ್ದು, ಕರಾಳತೆಯನ್ನು ತೋರಿಸುತ್ತವೆ.

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 5:34 IST
Last Updated 17 ಆಗಸ್ಟ್ 2021, 5:34 IST
ಆ 15 ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ಓಡೋಡಿ ಬಂದ ಜನ. ಉಪಗ್ರಹ ಚಿತ್ರ/ರಾಯಿಟರ್ಸ್‌
ಆ 15 ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ಓಡೋಡಿ ಬಂದ ಜನ. ಉಪಗ್ರಹ ಚಿತ್ರ/ರಾಯಿಟರ್ಸ್‌   
ತಾಲಿಬಾನ್‌ಗಳಿಂದ ತಪ್ಪಿಸಿಕೊಳ್ಳಲು ವಾಹನಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಜನ ಹೋಗುತ್ತಿರುವುದು, ಉಪಗ್ರಹ ಚಿತ್ರ/ರಾಯಿಟರ್ಸ್
ತಾಲಿಬಾನ್‌ಗಳಿಂದ ತಪ್ಪಿಸಿಕೊಳ್ಳಲು ವಾಹನಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಜನ ಹೋಗುತ್ತಿರುವುದು, ಉಪಗ್ರಹ ಚಿತ್ರ/ರಾಯಿಟರ್ಸ್
ಆ 15 ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ಓಡೋಡಿ ಬಂದ ಜನ. ಉಪಗ್ರಹ ಚಿತ್ರ/ರಾಯಿಟರ್ಸ್‌
ಆ 15 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ಜನ ಪ್ರವಾಹ ಸದ್ಯ ಆ ದೇಶದ ಪರಿಸ್ಥಿತಿಯನ್ನು ತೋರಿಸುತ್ತದೆ. ಉಪಗ್ರಹ ಚಿತ್ರ/ರಾಯಿಟರ್ಸ್‌
ಆ 15 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಸಿಕ್ಕ ವಿಮಾನ ಏರಲು ಓಡುತ್ತಿರುವುದು. ಉಪಗ್ರಹ ಚಿತ್ರ/ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.