ADVERTISEMENT

ಸೌದಿ ಶಿಕ್ಷಣ ತಜ್ಞಗೆ ಒಲಿದ ಜಾಗತಿಕ ಶಿಕ್ಷಕ ಪ್ರಶಸ್ತಿ: ₹8.69 ಕೋಟಿ ಬಹುಮಾನ

ಏಜೆನ್ಸೀಸ್
Published 13 ಫೆಬ್ರುವರಿ 2025, 11:40 IST
Last Updated 13 ಫೆಬ್ರುವರಿ 2025, 11:40 IST
<div class="paragraphs"><p>ಸೌದಿ ಅರೇಬಿಯಾ ಶಿಕ್ಷಕ ಮನ್ಸೂರ್ ಬಿನ್ ಅಬ್ದುಲ್ಲಾ ಅಲ್–ಮನ್ಸೂರ್ ಅವರಿಗೆ ದುಬೈ ರಾಜಕುಮಾರ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತುಮ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು&nbsp; &nbsp; </p></div>

ಸೌದಿ ಅರೇಬಿಯಾ ಶಿಕ್ಷಕ ಮನ್ಸೂರ್ ಬಿನ್ ಅಬ್ದುಲ್ಲಾ ಅಲ್–ಮನ್ಸೂರ್ ಅವರಿಗೆ ದುಬೈ ರಾಜಕುಮಾರ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತುಮ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು   

   

ದುಬೈ: ದಾನದ ಕಾರ್ಯ ಮತ್ತು ಕೈದಿಗಳಿಗೆ ಬೋಧನೆ ಮಾಡುತ್ತಿರುವ ಸೌದಿ ಅರೇಬಿಯಾದ ಶಿಕ್ಷಕ ಮನ್ಸೂರ್ ಅಲ್–ಮನ್ಸೂರ್ ಅವರನ್ನು ಜಾಗತಿಕ ಶಿಕ್ಷಕ ಪ್ರಶಸ್ತಿಗೆ  ಗುರುವಾರ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 1 ದಶಲಕ್ಷ ಡಾಲರ್ (₹8.69 ಕೋಟಿ) ನಗದು ಒಳಗೊಂಡಿದೆ. 

ದುಬೈನಲ್ಲಿ ನಡೆದ ವಿಶ್ವ ಸರ್ಕಾರಗಳ ಶೃಂಗದಲ್ಲಿ ಮನ್ಸೂರ್ ಅಲ್–ಮನ್ಸೂರ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು. ಈ ಮೂಲಕ ಮನ್ಸೂರ್ ಅವರು ಈ ಪ್ರಶಸ್ತಿಗೆ ಭಾಜನರಾದವರ ಪೈಕಿ 9ನೇಯವರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.