ADVERTISEMENT

ಕೋರ್ಟ್‌ಗೆ ಹಾಜರಾತಿ: ವಿಜಯ್ ಮಲ್ಯಗೆ ಕಡೇ ಅವಕಾಶ

ಪಿಟಿಐ
Published 10 ಫೆಬ್ರುವರಿ 2022, 20:50 IST
Last Updated 10 ಫೆಬ್ರುವರಿ 2022, 20:50 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ನವದೆಹಲಿ(ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವ್ಯಕ್ತಿಗತವಾಗಿ ಹಾಜರಾಗಲು ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ಕಡೆಯ ಅವಕಾಶವನ್ನು ನೀಡಿದೆ.

ಸುಮಾರು ₹ 9000 ಕೋಟಿಯಷ್ಟು ಬ್ಯಾಂಕ್‌ ಸಾಲವನ್ನು ಸುಸ್ತಿ ಉಳಿಸಿಕೊಂಡಿರುವ ಪ್ರಕರಣದಲ್ಲಿ, ವ್ಯಕ್ತಿಗತವಾಗಿ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಮಲ್ಯ ಅವರಿಗೆ ಈ ಸಂಬಂಧ ಈಗಾಗಲೇ ಹಲವು ಅವಕಾಶ ನೀಡಲಾಗಿದೆ. ಅಲ್ಲದೆ, ನವೆಂಬರ್ 30, 2021ರಂದು ನೀಡಿದ ಆದೇಶದಲ್ಲಿ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿತ್ತು ಎಂದು ಕೋರ್ಟ್‌ ಉಲ್ಲೇಖಿಸಿತು.

ADVERTISEMENT

ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌, ಎಸ್.ರವೀಂದ್ರ ಭಟ್, ಪಿ.ಎಸ್‌.ನರಸಿಂಹ ಅವರಿದ್ದ ಪೀಠವು, ವಿಚಾರಣೆಯನ್ನು ಎರಡು ವಾರಕ್ಕೆ ಮುಂದೂಡಿದರು. ನ.30ರ ಆದೇಶದಂತೆ ಅವರು ಹಾಜರಾಗಬೇಕು. ಇಲ್ಲದಿದ್ದರೆ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲಾಗುವುದು ಎಂದೂ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.