ADVERTISEMENT

ಕೋವಿಡ್‌ನಿಂದ ಮಕ್ಕಳ ರೋಗನಿರೋಧಕ ಶಕ್ತಿ ಕ್ಷೀಣ : ಅಧ್ಯಯನದ ವರದಿ

ಪಿಟಿಐ
Published 19 ಆಗಸ್ಟ್ 2020, 12:02 IST
Last Updated 19 ಆಗಸ್ಟ್ 2020, 12:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಕೋವಿಡ್‌–19ನಿಂದ ಬಳಲುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದ ಅವರ ರಕ್ತನಾಳಗಳಲ್ಲಿ ವಿಪರೀತ ಊತ, ಹೃದಯ ತೊಂದರೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಕಂಡುಬಂದಿದೆ.

ಕೋವಿಡ್‌ನಿಂದ ಬಳಲುವವರಿಗೆ ನೀಡುವ ಚಿಕಿತ್ಸೆಯಲ್ಲಿ ಸುಧಾರಣೆ ತರಲು ಈ ಸಂಶೋಧನೆ ನೆರವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.ಲಂಡನ್‌ನ ಕಿಂಗ್ಸ್‌ ಕಾಲೇಜ್‌ ಸಂಶೋಧಕರು ನಡೆಸಿದ ಅಧ್ಯಯನದ ವರದಿ ‘ನೇಚರ್‌ ಮೆಡಿಸಿನ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಕೋವಿಡ್‌–19ನಿಂದ ಬಳಲುವ ಕೆಲವು ಮಕ್ಕಳಲ್ಲಿ ಅಪರೂಪದ ಕಾಯಿಲೆ ಕಾಣಿಸಿಕೊಳ್ಳಲಿದ್ದು, ಇದನ್ನು ‘ಪೀಡಿಯಾಟ್ರಿಕ್‌ ಇನ್‌ಫ್ಲಮೇಟರಿ ಮಲ್ಟಿಸಿಸ್ಟಂ ಸಿಂಡ್ರೋಮ್‌’ (ಪಿಐಎಂಎಸ್‌–ಟಿಎಸ್‌) ಎಂದು ಹೆಸರಿಸಲಾಗಿದೆ. ಈ ಕಾಯಿಲೆ ಮತ್ತು ಕಾವಾಸಾಕಿ ರೋಗದ ಲಕ್ಷಣಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ.

ADVERTISEMENT

‘ಪಿಐಎಂಎಸ್‌–ಟಿಎಸ್‌ನಿಂದಾಗಿ ರಕ್ತನಾಳಗಳಲ್ಲಿ ವಿಪರೀತ ಊತ ಕಾಣಿಸಿಕೊಂಡು, ಕೆಲವೊಮ್ಮೆ ಹೃದಯಾಘಾತಕ್ಕೂ ಕಾರಣವಾಗುತ್ತದೆ’ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.