ADVERTISEMENT

ರಷ್ಯಾ ಸೇನೆಯ ಹಿರಿಯ ಸೇನಾಧಿಕಾರಿಯನ್ನು ಹತ್ಯೆ ಮಾಡಿದ ಉಕ್ರೇನ್

ರಾಯಿಟರ್ಸ್
Published 8 ಮಾರ್ಚ್ 2022, 3:34 IST
Last Updated 8 ಮಾರ್ಚ್ 2022, 3:34 IST
ರಷ್ಯಾ ಪಡೆಗಳ ದಾಳಿಯನ್ನು ಎದುರಿಸಲು ಸಜ್ಜಾಗಿರುವ ಉಕ್ರೇನ್ ಸೇನಾಪಡೆ
ರಷ್ಯಾ ಪಡೆಗಳ ದಾಳಿಯನ್ನು ಎದುರಿಸಲು ಸಜ್ಜಾಗಿರುವ ಉಕ್ರೇನ್ ಸೇನಾಪಡೆ   

ಕೀವ್: ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಮುಂದುವರಿದಿದ್ದು, ಹಾರ್ಕಿವ್‌ ನಗರದ ಸಮೀಪ ರಷ್ಯಾದ ಹಿರಿಯ ಸೇನಾಧಿಕಾರಿಯನ್ನು ಕೊಂದಿರುವುದಾಗಿ ಉಕ್ರೇನ್‌ ಮಂಗಳವಾರ ತಿಳಿಸಿದೆ. ಆಕ್ರಮಣದಲ್ಲಿ ಹತ್ಯೆಗೀಡಾದ ರಷ್ಯಾದ ಎರಡನೇ ಕಮಾಂಡರ್ ಇವರಾಗಿದ್ದಾರೆ.

ರಷ್ಯಾದ ಸೇನೆಯ 41 ನೇ ಪಡೆಯ ಮೊದಲ ಉಪ ಕಮಾಂಡರ್ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಸೋಮವಾರ ಹತ್ಯೆಗೀಡಾಗಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯದ ಗುಪ್ತಚರ ಮುಖ್ಯ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಚಾರವನ್ನು ರಷ್ಯಾದ ರಕ್ಷಣಾ ಸಚಿವಾಲಯವೂ ತಕ್ಷಣಕ್ಕೆ ದೃಢಪಡಿಸಿಲ್ಲ.

ADVERTISEMENT

ಸೇನೆಯ 41ನೇ ಪಡೆಯ ಉಪ ಕಮಾಂಡರ್ ಆಗಿದ್ದ ಆಂಡ್ರೆ ಸುಖೋವೆಟ್ಸ್ಕಿ ಅವರನ್ನು ಕೂಡ ಉಕ್ರೇನ್ ಪಡೆಗಳು ಫೆಬ್ರುವರಿ ತಿಂಗಳ ಕೊನೆಯಲ್ಲಿ ಹತ್ಯೆ ಮಾಡಿದ್ದವು ಎಂದು ಉಕ್ರೇನ್ ಹೇಳಿಕೊಂಡಿತ್ತು.

ರಷ್ಯಾದ 11 ಸಾವಿರಕ್ಕೂ ಅಧಿಕ ಯೋಧರನ್ನು ಕೊಂದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಆದರೆ, ರಷ್ಯಾ ಕೇವಲ 500 ಯೋಧರು ಮೃತಪಟ್ಟಿದ್ದಾರೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.