ADVERTISEMENT

ಬ್ರಿಟನ್ ಪ್ರಧಾನಿ ಚುನಾವಣೆ: 2ನೇ ಸಮೀಕ್ಷೆಯಲ್ಲೂ ರಿಷಿ ಸುನಕ್ ಹಿಂದಿಕ್ಕಿದ ಲಿಜ್

ಪಿಟಿಐ
Published 4 ಸೆಪ್ಟೆಂಬರ್ 2022, 12:24 IST
Last Updated 4 ಸೆಪ್ಟೆಂಬರ್ 2022, 12:24 IST
ಲಿಜ್ ಟ್ರುಸ್
ಲಿಜ್ ಟ್ರುಸ್   

ಲಂಡನ್: ಮುಂದಿನ ಪ್ರಧಾನಿಯನ್ನ ಆಯ್ಕೆ ಮಾಡಲಿರುವ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸದಸ್ಯರ ಮೇಲಿನ 2ನೇ ಸಮೀಕ್ಷೆಯಲ್ಲಿ ರಿಷಿ ಸುನಕ್‌ಗಿಂತಲೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್ ಅವರು ಮುಂದಿರುವುದು ಕಂಡುಬಂದಿದೆ.

ಬುಧವಾರ ಕನ್ಸರ್ವೆಟಿವ್ ಹೋಮ್‌ ವೆಬ್‌ಸೈಟ್‌ನಲ್ಲಿ ಸರ್ವೆಯನ್ನು ಬಿಡುಗಡೆ ಮಾಡಲಾಗಿದ್ದು, ಲಿಜ್ ಟ್ರುಸ್ ಪರವಾಗಿ ಶೇಕಡ 58ರಷ್ಟು ಸದಸ್ಯರ ಬೆಂಬಲವಿರುವುದು ಕಂಡುಬಂದಿದೆ.

ಬ್ರಿಟನ್‌ನ ಮಾಜಿ ಹಣಕಾಸು ಸಚಿವ ಮತ್ತು ಭಾರತ ಮೂಲದ ರಿಷಿ ಸುನಕ್ ಅವರು ಶೇಕಡ 26ರಷ್ಟು ಬೆಂಬಲ ಹೊಂದಿರುವಂತೆ ತೋರುತ್ತಿದ್ದು, ಶೇಕಡ 12 ರಷ್ಟು ಸದಸ್ಯರು ತಟಸ್ಥರಾಗಿದ್ದಾರೆ.

ADVERTISEMENT

ಬುಧವಾರದಿಂದ ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಕ್ಯಾಬಿನೆಟ್ ಸಚಿವೆ ಲಿಜ್ ಟ್ರುಸ್ ಅವರಿಗೆ, ಮಾಜಿ ಸಚಿವ ರಿಷಿ ಸುನಕ್‌ಗಿಂತಲೂ ಹೆಚ್ಚು ಬೆಂಬಲ ವ್ಯಕ್ತವಾಗಿರುವುದು ಕಂಡುಬಂದಿದೆ.

ಈ ಹಿಂದೆ ‘ಯುಗವ್‌’ ಎಂಬ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲೂ ಟ್ರುಸ್‌ ಅವರು ಭಾರತೀಯ ಸಂಜಾತ ರಿಷಿ ಸುನಕ್‌ ಅವರಿಗಿಂತಲೂ 38 ಪಾಯಿಂಟ್ಸ್‌ ಮುನ್ನಡೆ ಹೊಂದಿರುವುದಾಗಿ ತಿಳಿಸಲಾಗಿತ್ತು. ಟ್ರುಸ್‌ಗೆ ಶೇ 69ರಷ್ಟು ಮತ ಲಭಿಸಿದರೆ, ರಿಷಿ ಅವರು ಶೇ 31ರಷ್ಟು ಮತ ಪಡೆಯಲಿದ್ದಾರೆ ಎಂದೂ ಸಮೀಕ್ಷೆ ತಿಳಿಸಿತ್ತು.

‘ಈ ಹೊಸ ಮಾಹಿತಿಗಳು ಮತ್ತು ಯುಗವ್‌ ಸಮೀಕ್ಷೆಗಳನ್ನೇ ನಂಬುವುದಾದರೆ, ಒಟ್ಟಾರೆ ಸುನಕ್ ಪ್ರಧಾನಿ ಹುದ್ದೆಗೇರಬೇಕಾದರೆ ಮತ ಚಲಾವಣೆಯಲ್ಲಿ ಭಾರೀ ಬದಲಾವಣೆಯ ಅಗತ್ಯವಿದೆ. ಈಗಿನ ಪರಿಸ್ಥಿತಿ ನೋಡಿದರೆ ಅದು ಕಷ್ಟಸಾಧ್ಯ’ಎಂದು ಸಮೀಕ್ಷೆ ಹೇಳಿದೆ.

ಇತ್ತೀಚೆಗೆ, ಪ್ರಧಾನಿ ಚುನಾವಣೆಯ ಮಾಜಿ ಅಭ್ಯರ್ಥಿ ಮತ್ತು ಪಕ್ಷದ ಹಿರಿಯ ಸದಸ್ಯ, ಪಾಕಿಸ್ತಾನ ಮೂಲದ ಸಜಿದ್ ಜಾವಿದ್ ಅವರು ಸಹ, ಟ್ರುಸ್ ಅವರ ಪರ ವಾಲಿರುವುದು ರಿಷಿಗೆ ಮತ್ತಷ್ಟು ಹಿನ್ನಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.