ಡಮಾಸ್ಕಸ್: ಸಿರಿಯಾದಲ್ಲಿ ಅಲ್ಪಸಂಖ್ಯಾತ ದುರೂಸ್ ಪಂಗಡದ ಪಡೆ ಮತ್ತು ಸುನ್ನಿ ಬದಾವಿ ಬುಡಕಟ್ಟು ಪಂಗಡದ ಮಧ್ಯೆ ಸಂಘರ್ಷ ಆರಂಭಗೊಂಡಿದ್ದು, 30ಕ್ಕೂ ಹೆಚ್ಚು ಮಂದಿ ಮೃತಪಟ್ಟು ಸುಮಾರು 100 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ. ದುರೂಸ್ ಪಡೆಗಳಿಗೆ ಬೆಂಬಲ ಸೂಚಿಸಿ ಇಸ್ರೇಲ್ ಸಂಘರ್ಷದ ಅಂಗಳಕ್ಕೆ ಇಳಿದಿದೆ.
‘ಸಿರಿಯಾದ ಸೇನಾ ಟ್ಯಾಂಕ್‌ಗಳನ್ನು ತಡೆದಿದ್ದೇವೆ’ ಎಂದು ಇಸ್ರೇಲ್ ಹೇಳಿದೆ. ಸಿರಿಯಾದ ದಕ್ಷಿಣ ಭಾಗದಲ್ಲಿರುವ ಸ್ವೀದಾ ಪ್ರಾಂತ್ಯದಲ್ಲಿ ಭಾನುವಾರದಿಂದ ಆರಂಭಗೊಂಡ ಸಂಘರ್ಷವು ಸೋಮವಾರವೂ ಮುಂದುವರಿದಿದೆ. ಈವರೆಗೆ ಸುಮಾರು 89 ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಮಾನವ ಹಕ್ಕುಗಳ ಸಂಘಟನೆಯೊಂದು ಹೇಳಿದೆ.
ಸಂಘರ್ಷವನ್ನು ತಿಳಿಗೊಳಿಸಲು ಸಿರಿಯಾ ಸರ್ಕಾರವು ತನ್ನ ಸೇನೆಯನ್ನು ಸ್ವೀದಾಗೆ ಕಳುಹಿಸಿದೆ. ಈ ವೇಳೆ ಆರು ಮಂದಿ ಭದ್ರತಾ ಪಡೆ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ ಎಂದು ಇಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ. ಸಿರಿಯಾ ಸರ್ಕಾರವು ಸುನ್ನಿ ಬದಾವಿ ಬುಡಕಟ್ಟು ಪಂಗಡದ ಪರ ಇದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.