ಅಮಿತ್ ಶಾ (ಸಂಗ್ರಹ ಚಿತ್ರ)
– ಪಿಟಿಐ ಚಿತ್ರ
ಭೋಪಾಲ್: ಭಾರತವು ಸೆಮಿಕಂಡಕ್ಟರ್ ಉತ್ಪಾದನಾ ವಲಯವನ್ನು ಪ್ರವೇಶಿಸಿದ್ದು ತಡವಾಗಿದೆಯಾದರೂ, ಅದು ಗಟ್ಟಿಯಾಗಿ ಅಲ್ಲಿ ಪಾದ ಊರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೇಶವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಲಿದೆ, ಮುಂದೆ ಅದನ್ನು ರಫ್ತು ಮಾಡುವ ಹಂತವನ್ನೂ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆದ ಅಭ್ಯುದಯ ಮಧ್ಯಪ್ರದೇಶ ಅಭಿವೃದ್ಧಿ ಶೃಂಗದಲ್ಲಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಸ್ಮರಣಾರ್ಥ ₹2 ಲಕ್ಷ ಕೋಟಿ ಮೊತ್ತದ ಕೈಗಾರಿಕಾ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಿದ್ದಾರೆ.
‘ಡಿಜಿಟಲ್ ವಹಿವಾಟು ಹಾಗೂ ಫಿನ್‌ಟೆಕ್ ವಲಯಗಳಲ್ಲಿಯೂ ಭಾರತವು ಭಾರಿ ಮುನ್ನಡೆ ಸಾಧಿಸಿದೆ. 2024–25ರಲ್ಲಿ ಜಗತ್ತಿನ ಶೇಕಡ 46ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆದಿವೆ’ ಎಂದು ಶಾ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.