ADVERTISEMENT

ಅಫ್ಗಾನಿಸ್ತಾನ ಪರಿಸ್ಥಿತಿ ಬಗ್ಗೆ ಜರ್ಮನ್‌ ರಾಯಭಾರಿ ಜೊತೆ ತಾಲಿಬಾನ್‌ ಮಾತುಕತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2021, 9:19 IST
Last Updated 3 ಸೆಪ್ಟೆಂಬರ್ 2021, 9:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್:‌ ತಾಲಿಬಾನ್‌ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್‌ ಮೊಹಮ್ಮದ್‌ ಅಬ್ಬಾಸ್‌ ಸ್ತಾನೆಕ್‌ಝೈ, ಅಫ್ಗಾನಿಸ್ತಾನದಲ್ಲಿನ ಜರ್ಮನಿ ರಾಯಭಾರಿ ಮಾರ್ಕ್ಸ್‌ ಪುಟ್ಜೆಲ್‌ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅಬ್ಬಾಸ್‌ ಮತ್ತು ಪುಟ್ಜೆಲ್‌ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ, ಕಾಬೂಲ್‌ ವಿಮಾನ ನಿಲ್ದಾಣವನ್ನು ಮತ್ತೆ ತೆರೆಯುವುದು ಹಾಗೂ ಅಫ್ಗಾನ್‌ಗೆ ಜರ್ಮನಿಯ ಮಾನವೀಯ ನೆರವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು TOLOನ್ಯೂಸ್‌ ವರದಿ ಮಾಡಿದೆ.

ತಾಲಿಬಾನ್‌ನ ಹಿರಿಯ ನಾಯಕನಾಗಿರುವ ಅಬ್ಬಾಸ್‌, ಕತಾರ್‌ನಲ್ಲಿರುವ ಟರ್ಕಿಯ ರಾಯಭಾರಿ ಮುಸ್ತಾಫ ಗೊಕ್ಸು ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ADVERTISEMENT

ಅಫ್ಗಾನಿಸ್ತಾನಸರ್ಕಾರ ಪತನವಾಗಿ ಆಡಳಿತವು ತಾಲಿಬಾನ್‌ ವಶವಾದ ಬಳಿಕ ಆ ದೇಶದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.