ADVERTISEMENT

ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರ ದಾಳಿ: 16 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 11:31 IST
Last Updated 14 ಮಾರ್ಚ್ 2022, 11:31 IST
ಡೆನಿಸ್ ಪುಶಿಲಿನ್
ಡೆನಿಸ್ ಪುಶಿಲಿನ್   

ಮಾಸ್ಕೊ: ಸಂಘರ್ಷ ಶಮನಗೊಳಿಸುವಮಾತುಕತೆಗೆ ಮುನ್ನ ಪ್ರತ್ಯೇಕವಾದಿಗಳ ರಾಜಧಾನಿ ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರು ನಡೆಸಿದ ದಾಳಿಯಲ್ಲಿ 16 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ಉಕ್ರೇನ್‌ನಲ್ಲಿನ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಸೋಮವಾರ ತಿಳಿಸಿದ್ದಾರೆ.

ಉಕ್ರೇನ್‌ ಸೇನೆ ಉಡಾಯಿಸಿರುವ ಟೋಚ್ಕಾ ಕ್ಷಿಪಣಿ ನಗರದ ಕೇಂದ್ರ ಭಾಗಕ್ಕೆ ಬಂದು ಅಪ್ಪಳಿಸಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟು, 23ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಮಕ್ಕಳೂ ಇದ್ದಾರೆ ಎಂದು ಪ್ರತ್ಯೇಕವಾದಿ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವಾರಗಳಿಗೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಭೀಕರ ಯುದ್ಧವನ್ನು ಕೊನೆಗಾಣಿಸಲುಉಕ್ರೇನ್ ಮತ್ತು ರಷ್ಯಾದ ಸಂಧಾನಕಾರರು ನಾಲ್ಕನೇ ಸುತ್ತಿನ ಮಾತುಕತೆಗೆ ಭೇಟಿಯಾಗಲು ನಿರ್ಧರಿಸಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ.

ADVERTISEMENT

‘ಕ್ಷಿಪಣಿ ವಸತಿ ಪ್ರದೇಶಗಳಿಗೆ ಹಾನಿ ಮಾಡಿದೆ. ನಾಗರಿಕರು ಸಾವನ್ನಪ್ಪಿದ್ದಾರೆ’ಡೊನೆಟ್‌ಸ್ಕ್‌ಪೀಪಲ್ಸ್ ರಿಪಬ್ಲಿಕ್ ಮುಖ್ಯಸ್ಥ ಡೆನಿಸ್ ಪುಶಿಲಿನ್ ರಷ್ಯಾದ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.