ADVERTISEMENT

ಭಾರತೀಯ ಏಳು ಸಾಧಕ ಮಹಿಳೆಯರಿಗೆ ಸನ್ಮಾನ

ಪಿಟಿಐ
Published 10 ಮಾರ್ಚ್ 2021, 6:53 IST
Last Updated 10 ಮಾರ್ಚ್ 2021, 6:53 IST
ನ್ಯೂಯಾರ್ಕ್‌ನಲ್ಲಿನ ಭಾರತದ ಕಾನ್ಸುಲ್ ಜನರಲ್ ರಣಧೀರ್‌ ಜೈಸ್ವಾಲ್ ಅವರು ಸಾಧಕರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು
ನ್ಯೂಯಾರ್ಕ್‌ನಲ್ಲಿನ ಭಾರತದ ಕಾನ್ಸುಲ್ ಜನರಲ್ ರಣಧೀರ್‌ ಜೈಸ್ವಾಲ್ ಅವರು ಸಾಧಕರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು   

ನ್ಯೂಯಾರ್ಕ್‌: ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಭಾರತದ ಏಳು ಸಾಧಕ ಮಹಿಳೆಯರನ್ನು ಅಮೆರಿಕದಲ್ಲಿ ಗೌರವಿಸಲಾಯಿತು.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಸಂಘಗಳ ಒಕ್ಕೂಟ, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ (ಎಫ್‌ಐಎ), ಭಾರತದ ಕಾನ್ಸುಲ್ ಜನರಲ್ ಕಚೇರಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯನ್ನು ಸನ್ಮಾನಿಸಲಾಯಿತು ಎಂದು ಎಫ್‌ಐಎ ಪ್ರಕಟಣೆ ತಿಳಿಸಿದೆ. ಪುರಸ್ಕೃತರಲ್ಲಿ ಆರು ಮಂದಿ ಸಾಧಕಿಯರು ಮತ್ತು ಒಂದು ಮಹಿಳಾ ಸಂಘಟನೆ ಇದೆ.

ಸಾಧಕರು: ವಡೋದರಾದ ನವರಾಚನಾ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ತೇಜಲ್ ಅಮಿನ್‌, ವೈದ್ಯೆ ಡಾ. ಉಮಾರಾಣಿ ಮಧುಸೂದನ, ದಂತ ವೈದ್ಯೆ ಡಾ. ಅಭಾ ಜೈಸ್ವಾಲ್. ಶುಶ್ರೂಷಕಿ ರಶ್ಮಿ ಅಗರ್‌ವಾಲ್‌, ವಕೀಲರಾದ ಸಬೀನಾ ಧಿಲ್ಲಾನ್‌, ‘ಮಾಸ್ಕ್‌ ಸ್ಕ್ವಾಡ್‌’ ಗುಂಪು, ನಟಿ ರಶಾನಾ ಷಾ ಅವರನ್ನು ಈ ವೇಳೆ ಅಭಿನಂದಿಸಲಾಯಿತು.

ADVERTISEMENT

ನ್ಯೂಯಾರ್ಕ್‌ನಲ್ಲಿನ ಭಾರತದ ಕಾನ್ಸುಲ್ ಜನರಲ್ ರಣಧೀರ್‌ ಜೈಸ್ವಾಲ್ ಅವರು ಸಾಧಕರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.