ಸ್ಯಾನ್ ಜೋಸ್ (ಅಮೆರಿಕ): ಸ್ಯಾನ್ ಜೋಸ್‌ನ ರೈಲ್‌ಯಾರ್ಡ್‌ನಲ್ಲಿ ಬುಧವಾರ ಗುಂಡಿನ ದಾಳಿ ನಡೆದಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿ ಸಹ ಮೃತಪಟ್ಟಿದ್ದಾನೆ ಎಂದು ಸಾಂಟಾ ಕ್ಲಾರಾ ಕೌಂಟಿ ಶೆರಿಫ್ ವಕ್ತಾರ ರಸ್ಸೆಲ್ ಡೇವಿಸ್ ತಿಳಿಸಿದ್ದಾರೆ.
ಸಿಲಿಕಾನ್ ವ್ಯಾಲಿಗೆ ಸೇವೆ ಒದಗಿಸುತ್ತಿರುವ ರೈಲ್‌ಯಾರ್ಡ್‌ನಲ್ಲಿ ಬುಧವಾರ ಬೆಳಿಗ್ಗೆ 6.30ಕ್ಕೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಶಂಕಿತ ಮೃತಪಟ್ಟಿದ್ದಾನೆ ಎಂದು ಡೇವಿಸ್ ಹೇಳಿದ್ದಾರೆ.
ಈ ಬಗ್ಗೆ ಸಾಂತ ಕ್ಲಾರಾ ಕೌಂಟಿ ಶೆರಿಫ್ ಟ್ವೀಟ್ ಮಾಡಿದ್ದು, ಶೂಟೌಟ್ ನಡೆಸಿದ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.