ADVERTISEMENT

ನ್ಯೂಯಾರ್ಕ್‌ನ ಸಬ್‌ವೇ ಸ್ಟೇಷನ್‌ನಲ್ಲಿ ಗುಂಡಿನ ದಾಳಿ; ಸ್ಫೋಟಕ ಸಾಧನ ಪತ್ತೆ

ಏಜೆನ್ಸೀಸ್
Published 12 ಏಪ್ರಿಲ್ 2022, 14:40 IST
Last Updated 12 ಏಪ್ರಿಲ್ 2022, 14:40 IST
ಗುಂಡಿನ ದಾಳಿ ನಡೆದಿರುವ ಸ್ಥಳದ ಸಮೀಪ ಪೊಲೀಸ್‌ ಭದ್ರತೆ
ಗುಂಡಿನ ದಾಳಿ ನಡೆದಿರುವ ಸ್ಥಳದ ಸಮೀಪ ಪೊಲೀಸ್‌ ಭದ್ರತೆ   

ನ್ಯೂಯಾರ್ಕ್: ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಸಬ್‌ವೇ ಸ್ಟೇಷನ್‌ನಲ್ಲಿ ಮಂಗಳವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿದ್ದು, ಐದು ಮಂದಿ ಗುಂಡೇಟು ತಗುಲಿದೆ.

'ಸನ್‌ಸೆಟ್‌ ಪಾರ್ಕ್‌ ಸಮೀಪದ ನಿಲ್ದಾಣದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಅಲ್ಲಿ ಹಲವು ಜನರಿಗೆ ಗುಂಡೇಟು ಬಿದ್ದಿತ್ತು ಹಾಗೂ ಸ್ಫೋಟಕ ಸಾಧನಗಳು ಪತ್ತೆಯಾಗಿವೆ' ಎಂದು ನ್ಯೂಯಾರ್ಕ್‌ ನಗರದ ಅಗ್ನಿಶಾಮಕ ಇಲಾಖೆ ವಕ್ತಾರರು ಹೇಳಿದ್ದಾರೆ.

ಗುಂಡಿನ ದಾಳಿ ನಡೆಸಿರುವ ಹಂತಕ ಕಟ್ಟಡ ಕಾಮಗಾರಿ ಸಿಬ್ಬಂದಿಗಳು ಬಳಸುವಂತಹ ನಡುವಂಗಿ ಹಾಗೂ ಗ್ಯಾಸ್‌ ಮಾಸ್ಕ್‌ ಧರಿಸಿದ್ದರ ಬಗ್ಗೆ ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ADVERTISEMENT

ರಕ್ತಸಿಕ್ತರಾಗಿದ್ದ ಪ್ರಯಾಣಿಕರು ನಿಲ್ದಾಣದ ನೆಲದ ಮೇಲೆ ಬಿದ್ದಿರುವುದು ಫೋಟೊವೊಂದರಲ್ಲಿ ಕಂಡು ಬಂದಿದೆ. 13 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗುಂಡೇಟು ಬಿದ್ದಿರುವವರ ಸ್ಥಿತಿಯ ಬಗ್ಗೆ ತಿಳಿದು ಬಂದಿಲ್ಲ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.