ADVERTISEMENT

ಶಾಂಘೈ: ಕೋವಿಡ್‌ ಪೀಡಿತರ ಮನೆಗಳಲ್ಲಿ ಸೋಂಕು ನಿವಾರಕ ಸಿಂಪಡಣೆ

ಏಜೆನ್ಸೀಸ್
Published 10 ಮೇ 2022, 11:10 IST
Last Updated 10 ಮೇ 2022, 11:10 IST
ಶಾಂಘೈನಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ ವ್ಯಕ್ತಿಗೆ ಆರೋಗ್ಯ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸಿದರು –ಎಪಿ/ಪಿಟಿಐ ಚಿತ್ರ
ಶಾಂಘೈನಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ ವ್ಯಕ್ತಿಗೆ ಆರೋಗ್ಯ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸಿದರು –ಎಪಿ/ಪಿಟಿಐ ಚಿತ್ರ   

ಬೀಜಿಂಗ್: ಕೊರೊನಾ ವೈರಸ್‌ನ ರೂಪಾಂತರಿ ಓಮೈಕ್ರಾನ್ ತಳಿ ಸೋಂಕು ಪ್ರಸರಣವನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ಶಾಂಘೈ ನಗರ ಆಡಳಿತ ಕೈಗೊಂಡಿದೆ. ಕೋವಿಡ್‌–19 ದೃಢಪಟ್ಟವರ ಮನೆಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

‘ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ಸುರಂಗಮಾರ್ಗಗಳನ್ನು ಮಂಗಳವಾರ ಮುಚ್ಚಲಾಗಿದೆ. ಆ ಮೂಲಕ, ಇದೇ ಮೊದಲ ಬಾರಿಗೆ ನಗರದ ಎಲ್ಲ ಸಂಚಾರ ವ್ಯವಸ್ಥೆಯನ್ನು ಬಂದ್‌ ಮಾಡಿದಂತಾಗಿದೆ’ ಆನ್‌ಲೈನ್‌ ಮಾಧ್ಯಮ ‘ದಿ ಪೇಪರ್’ ವರದಿ ಮಾಡಿದೆ.

‘ಕೆಲವು ಪ್ರದೇಶಗಳಲ್ಲಿ ಶೌಚಾಲಯ ಹಾಗೂ ಅಡುಗೆ ಮನೆಗಳನ್ನು ಬಹಳಷ್ಟು ಜನರು ಬಳಸುವ ವ್ಯವಸ್ಥೆ ಇದೆ. ಇಂಥ ಪ್ರದೇಶಗಳಲ್ಲಿಯೂ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಲಾಗುತ್ತದೆ’ ಎಂದು ಅಧಿಕಾರಿ ಜಿನ್ ಚೆನ್‌ ಹೇಳಿದ್ದಾರೆ.

ADVERTISEMENT

ಶಾಂಘೈನಲ್ಲಿ ಸೋಮವಾರ ಕೋವಿಡ್‌ನ 3,000 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಏಪ್ರಿಲ್‌ ಮಧ್ಯಭಾಗದಲ್ಲಿ ಗರಿಷ್ಠ 26,000 ಹೊಸ ಪ್ರಕರಣಗಳು ವರದಿಯಾಗಿದ್ದವು.

ಪರೀಕ್ಷೆ: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಮತ್ತೊಂದು ಸುತ್ತಿನ ಸಾಮೂಹಿಕ ಕೋವಿಡ್‌ ಪರೀಕ್ಷೆಗೆ ಚಾಲನೆ ನೀಡಲಾಗಿದೆ. ನಗರದಲ್ಲಿ ಸೋಮವಾರ ಕೋವಿಡ್‌ನ 74 ಹೊಸ ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.