ADVERTISEMENT

ಕೋವಿಡ್‌: ಶಾಂಘೈನಲ್ಲಿ ಲಕ್ಷಣ ರಹಿತ ಪ್ರಕರಣಗಳೇ ಹೆಚ್ಚು

ಪಿಟಿಐ
Published 8 ಏಪ್ರಿಲ್ 2022, 13:11 IST
Last Updated 8 ಏಪ್ರಿಲ್ 2022, 13:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಂಘೈ: ಚೀನಾದ ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ವಾಣಿಜ್ಯ ನಗರಿ ಶಾಂಘೈನಲ್ಲಿ ಲಕ್ಷಣ ರಹಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸೋಂಕಿತರು, ಸೌಮ್ಯ ಲಕ್ಷಣ ಮತ್ತು ಲಕ್ಷಣ ರಹಿತ ಪ್ರಕರಣಗಳ ಮಾಹಿತಿ ಅಸ್ಪಷ್ಟವಾಗಿದೆ. ಇದು ಸ್ಥಳೀಯ ಆರೋಗ್ಯ ಸಲಹೆಗಾರರನ್ನು ಗೊಂದಲಕ್ಕೀಡು ಮಾಡಿದೆ.

ದೇಶದಲ್ಲಿಲಕ್ಷಣ ರಹಿತ ಸೋಂಕಿತರ ಸಂಖ್ಯೆಯಲ್ಲಿ ಬಹುಪಾಲು ಶಾಂಘೈನದ್ದೆ ಆಗಿದೆ. ಉಳಿದ ಭಾಗಗಳಿಗಿಂತ ಇಲ್ಲಿ ಸೌಮ್ಯ ಲಕ್ಷಣದ ಪ್ರಕರಣಗಳು ಹೆಚ್ಚಾಗುತ್ತಿವೆ. ಏಪ್ರಿಲ್‌ 7ರಂದು 20 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ ಶೇ 97ರಷ್ಟು ಲಕ್ಷಣ ರಹಿತ ಪ್ರಕರಣಗಳು. ಇಡೀ ವಿಶ್ವದಲ್ಲಿ ಎಲ್ಲೂ ಇಷ್ಟು ಪ್ರಮಾಣದ ಪ್ರಕರಣಗಳು ವರದಿಯಾಗಿಲ್ಲ. ಇದುವರೆಗೆಬೇರೆ ಸ್ಥಳಗಳಲ್ಲಿ ಶೇ 50ರಷ್ಟು ಪ್ರಕರಣಗಳು ಮಾತ್ರ ವರದಿಯಾಗಿವೆ. ಜಿಲಿನ್‌ ಪ್ರದೇಶದಲ್ಲೂ ಲಕ್ಷಣ ರಹಿತ ಪ್ರಕರಣಗಳು ಹೆಚ್ಚಾಗುತ್ತಿವೆ.

ಓಮೈಕ್ರಾನ್‌ ರೂಪಾಂತರಿ ತಳಿಹೆಚ್ಚಾಗುತ್ತಿರುವುದರಿಂದ ಜನರ ಆತಂಕ ದೂರ ಮಾಡಲು ಲಕ್ಷಣ ರಹಿತ ಪ್ರಕರಣಗಳೇ ಹೆಚ್ಚು ಎಂಬುದಾಗಿ ತೋರಿಸಲಾಗುತ್ತಿದೆ ಎಂದು ಚೀನಾದ ನಾಗರಿಕರು ದೂರಿದ್ದಾರೆ.

ADVERTISEMENT

ಮತ ಚಲಾವಣೆಗೆ ಅವಕಾಶ ಇಲ್ಲ: ಲಾಕ್‌ಡೌನ್‌ ಮತ್ತು ಕಠಿಣ ನಿರ್ಬಂಧಗಳಿಗೆ ಒಳಪಟ್ಟಿರುವ ಶಾಂಘೈನಲ್ಲಿ ನೆಲೆಸಿರುವ ಫ್ರಾನ್ಸ್ ನಾಗರಿಕರು ಭಾನುವಾರ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಫ್ರಾನ್ಸ್‌ ರಾಯಭಾರಿ ಕಚೇರಿ ತಿಳಿಸಿದೆ.

ಮತಗಟ್ಟೆ ತೆರೆಯಲು ಹಾಗೂ ಮತದಾನ ಪ್ರಕ್ರಿಯೆ ನಡೆಸಲು ಅನುಮತಿ ಕೋರಿದ್ದ ರಾಯಭಾರಿ ಕಚೇರಿಯ ಮನವಿಯನ್ನು ಚೀನಾದ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ಹೇಳಿದೆ. ಶಾಂಘೈನಲ್ಲಿ ಫ್ರಾನ್ಸ್‌ನ 4,848 ನೋಂದಾಯಿತ ಮತದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.