ಇಲಾನ್ ಮಸ್ಕ್ , ಮೋದಿ ಭೇಟಿ
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದಲ್ಲಿ ಉದ್ಯಮ ದಿಗ್ಗಜ ಇಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಉಭಯ ದೇಶಗಳ ನಡುವೆ ಬಾಹ್ಯಾಕಾಶ, ಉಪಗ್ರಹ ಆಧಾರಿತ ಅಂತರ್ಜಾಲ ಸೇವೆ, ನಾವಿನ್ಯತೆ, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಭೇಟಿ ವೇಳೆ ಇಲಾನ್ ಮಸ್ಕ್ ಅವರ ಗೆಳತಿ ಶಿವಾನ್ ಜಿಲಿಸ್, ಇಬ್ಬರು ಮಕ್ಕಳು ಇದ್ದರು. ಪ್ರಧಾನಿ ಮೋದಿ ಅವರು ಮಸ್ಕ್ ಮಕ್ಕಳಿಗೆ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ದಿ ಕ್ರೆಸೆಂಟ್ ಮೂನ್, ಆರ್.ಕೆ. ನಾರಾಯಣ್ ಅವರ ಪುಸ್ತಕ ಹಾಗೂ ಪಂಡಿತ್ ವಿಷ್ಣು ಶರ್ಮಾ ಅವರ ಪಂಚತಂತ್ರ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
39 ವರ್ಷದ ಶಿವಾನ್ ಜಿಲಿಸ್ ನ್ಯೂರೊಲಿಂಕ್ ಕಂಪನಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಶಿವಾನ್ ಹುಟ್ಟಿದ್ದು ಕೆನಾಡದಲ್ಲಿ. ಯಾಲೆ ವಿಶ್ವವಿದ್ಯಾಲಯದಲ್ಲಿ ಶಿವಾನ್ ಪದವಿ ಪಡೆದಿದ್ದಾರೆ. ಇವರ ತಂದೆ ರಿಚರ್ಡ್ ಜಿಲಿಸ್ ಕೆನಡಾದವರು, ತಾಯಿ ಶ್ರದ್ಧಾ ಭಾರತೀಯ ಮೂಲದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.