ADVERTISEMENT

ಕಠ್ಮಂಡು: ಎಂಟು ಮಂದಿ ಭಾರತೀಯರ ಸಾವು

ಅನಿಲ ಸೋರಿಕೆಯಿಂದ ಉಸಿರುಕಟ್ಟಿರುವ ಶಂಕೆ

ಪಿಟಿಐ
Published 21 ಜನವರಿ 2020, 19:45 IST
Last Updated 21 ಜನವರಿ 2020, 19:45 IST
ಮೃತಪಟ್ಟ ಎಂಟು ಮಂದಿಯಲ್ಲಿ, ಪುಟ್ಟ ಮಗುವಿನ ಮೃತದೇಹವನ್ನು ಆ್ಯಂಬುಲೆನ್ಸ್‌ನೊಳಗೆ ತೆಗೆದುಕೊಂಡು ಹೋಗುತ್ತಿರುವುದು – ರಾಯಿಟರ್ಸ್‌ ಚಿತ್ರ
ಮೃತಪಟ್ಟ ಎಂಟು ಮಂದಿಯಲ್ಲಿ, ಪುಟ್ಟ ಮಗುವಿನ ಮೃತದೇಹವನ್ನು ಆ್ಯಂಬುಲೆನ್ಸ್‌ನೊಳಗೆ ತೆಗೆದುಕೊಂಡು ಹೋಗುತ್ತಿರುವುದು – ರಾಯಿಟರ್ಸ್‌ ಚಿತ್ರ   

ಕಠ್ಮಂಡು: ಪ್ರವಾಸಕ್ಕೆ ತೆರಳಿದ್ದ ನಾಲ್ವರು ಮಕ್ಕಳೂ ಸೇರಿದಂತೆ ಕೇರಳದ ಒಟ್ಟು ಎಂಟು ಮಂದಿ ಇಲ್ಲಿನ ರೆಸಾರ್ಟ್‌ವೊಂದರಲ್ಲಿ ಮಂಗಳವಾರ ಮೃತಪಟ್ಟಿದ್ದು, ಅನಿಲ ಸೋರಿಕೆಯೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.

‘ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ವಿಮಾನದ ಮೂಲಕ ಎಚ್‌ಎಎಂಎಸ್‌ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದರು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸುಶೀಲ್‌ ಸಿಂಗ್‌ ರಾಥೋಡ್‌ ಹೇಳಿದರು.

‘ಇಬ್ಬರು ದಂಪತಿ, ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ಕೇರಳದಿಂದ ಪ್ರಸಿದ್ಧ ಪ್ರವಾಸಿತಾಣ ಪೋಖರಾಗೆ ತೆರಳಿದ್ದರು. ಅಲ್ಲಿಂದ ವಾಪಸ್‌ ಬರುವ ವೇಳೆ ಎವೆರೆಸ್ಟ್‌ ಪನೋರಮಾ ರೆಸಾರ್ಟ್‌ನಲ್ಲಿ ಸೋಮವಾರ ರಾತ್ರಿ ತಂಗಿದ್ದರು’ ಎಂದು ಮಾಹಿತಿ ನೀಡಿದರು.

ADVERTISEMENT

ಕೊಠಡಿಯನ್ನು ಬಿಸಿಯಾಗಿಡಲು ಗ್ಯಾಸ್‌ ಹೀಟರ್‌ ಅನ್ನು ಹಾಕಿಕೊಂಡಿದ್ದಾರೆ. ಕೊಠಡಿಯ ಎಲ್ಲಾ ಕಿಟಕಿಗಳನ್ನು ಮುಚ್ಚಿದ್ದ ಕಾರಣ, ಉಸಿರುಕಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತದೇಹಗಳು ಬುಧವಾರ ಕೇರಳಕ್ಕೆ ಬರುವ ನಿರೀಕ್ಷೆ ಇದೆ. ‘ಭಾರತದ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಕೇರಳದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.