ADVERTISEMENT

ಫುಟ್‌ಬಾಲ್ ನೋಡುತ್ತಿದ್ದವರ ಮೇಲೆ ಗುಂಡಿನ ದಾಳಿ, ನಾಲ್ವರು ಸಾವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 8:56 IST
Last Updated 18 ನವೆಂಬರ್ 2019, 8:56 IST
ಮನೆಯ ಹಿತ್ತಿಲಿನಲ್ಲಿ ಪಾರ್ಟಿ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ
ಮನೆಯ ಹಿತ್ತಿಲಿನಲ್ಲಿ ಪಾರ್ಟಿ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ   

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಫ್ರೆಸ್ನೊ ನಗರದಲ್ಲಿ ಅಪರಿಚಿತ ಶಂಕಿತರು ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.

ಸೀಸರ್ ಅವೆನ್ಯೂ ಬಳಿಯ ಈಸ್ಟ್ ಲಮೋನಾ ಅವೆನ್ಯೂದ 5300 ಬ್ಲಾಕ್‌ನಲ್ಲಿರುವ ಮನೆಯ ಹಿತ್ತಲಿನಲ್ಲಿ ಭಾನುವಾರ ರಾತ್ರಿ 10 ಜನರಿಗೆ ಗುಂಡು ಹಾರಿಸಲಾಗಿದೆ ಎಂದು ಫ್ರೆಸ್ನೋ ಪೊಲೀಸರು ತಿಳಿಸಿದ್ದಾರೆ ಎಂದು ದಿ ಫ್ರೆಸ್ನೊ ಬೀ ವರದಿ ಮಾಡಿದೆ.

ಇದೊಂದು ಸಾಮೂಹಿಕ ಗುಂಡಿನ ದಾಳಿಯಾಗಿದ್ದು, ಅಪರಿಚಿತ ಶಂಕಿತರು ಮನೆಯ ಹಿತ್ತಲಿಗೆ ನುಸುಳಿದ್ದಾರೆ ಮತ್ತು ಏಕಾಏಕಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಫ್ರೆಸ್ನೋ ಪೊಲೀಸ್ ಲೆಫ್ಟಿನೆಂಟ್ ಬಿಲ್ ಡೂಲೆ ತಿಳಿಸಿದ್ದಾರೆ.

ADVERTISEMENT

ಕುಟುಂಬದವರು ಮತ್ತು ಸ್ನೇಹಿತರು ಒಂದೆಡೆ ಸೇರಿ ಮನೆಯ ಹಿತ್ತಲಿನಲ್ಲಿ ಪಾರ್ಟಿ ಮಾಡುತ್ತಫುಟ್‌ಬಾಲ್ ಪಂದ್ಯವನ್ನು ನೋಡುತ್ತಿದ್ದ ವೇಳೆ ದುಷ್ಕರ್ಮಿಗಳುಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿದಾಗ ಹಿತ್ತಲಿನಲ್ಲಿ ಹಲವರುಸತ್ತು ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.