ADVERTISEMENT

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಒಬ್ಬ ಸಾವು, ನಾಲ್ವರಿಗೆ ಗಾಯ

ಏಜೆನ್ಸೀಸ್
Published 9 ಏಪ್ರಿಲ್ 2021, 1:04 IST
Last Updated 9 ಏಪ್ರಿಲ್ 2021, 1:04 IST
ಸ್ಥಳಕ್ಕೆ ಧಾವಿಸಿದ ಪೊಲೀಸರು – ಎಪಿ ಚಿತ್ರ
ಸ್ಥಳಕ್ಕೆ ಧಾವಿಸಿದ ಪೊಲೀಸರು – ಎಪಿ ಚಿತ್ರ   

ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್‌ನ ಬ್ರಿಯಾನ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಿಯಾನ್‌ನ ‘ಕೆಂಟ್ ಮೂರ್ ಕ್ಯಾಬಿನೆಟ್ಸ್’ ಕಂಪನಿಯ ಆವರಣದಲ್ಲಿ ದಾಳಿ ನಡೆದಿದೆ.

ದಾಳಿಕೋರ ‘ಕೆಂಟ್ ಮೂರ್ ಕ್ಯಾಬಿನೆಟ್ಸ್’ನ ಉದ್ಯೋಗಿ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ದಾಳಿಕೋರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಬ್ರಿಯಾನ್‌ ಪೊಲೀಸ್ ಮುಖ್ಯಸ್ಥ ಎರಿಕ್ ಬಸ್ಕೆ ತಿಳಿಸಿದ್ದಾರೆ.

ADVERTISEMENT

ಕಂಪನಿಯ ಉದ್ಯೋಗಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಒಬ್ಬರು ಪ್ರತ್ಯಕ್ಷದರ್ಶಿ ಶಂಕಿತನನ್ನು ಗುರುತಿಸಿದ್ದಾರೆ. ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಜೇಸನ್ ಜೇಮ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.