ADVERTISEMENT

ಗುಂಡಿನ ದಾಳಿಗೆ ಇಸ್ರೇಲ್‌ನ ಮೂವರ ಸಾವು

ಏಜೆನ್ಸೀಸ್
Published 6 ಜನವರಿ 2025, 12:38 IST
Last Updated 6 ಜನವರಿ 2025, 12:38 IST
ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸೇರಿದ್ದ ಭದ್ರತಾ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರು –ಎಎಫ್‌ಪಿ ಚಿತ್ರ
ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸೇರಿದ್ದ ಭದ್ರತಾ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರು –ಎಎಫ್‌ಪಿ ಚಿತ್ರ   

ಟೆಲ್‌ ಅವೀವ್: ಇಸ್ರೇಲ್‌ ಪ್ರಜೆಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಸೋಮವಾರ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಒಳಗೊಂಡಂತೆ ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ ವಶದಲ್ಲಿರುವ ವೆಸ್ಟ್‌ಬ್ಯಾಂಕ್‌ನ ಅಲ್‌–ಫಂದೂಖ್ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ಯಾಲೆಸ್ಟೀನಿಯನ್ನರು ಈ ಪ್ರದೇಶದಲ್ಲಿ ಇಸ್ರೇಲ್‌ ಪ್ರಜೆಗಳನ್ನು ಗುರಿಯಾರಿಸಿ ಹಲವು ಸಲ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ, ಚೂರಿ ಇರಿತ ಮತ್ತು ಜನರ ಮೇಲೆ ವಾಹನಗಳನ್ನು ನುಗ್ಗಿಸುವ ಘಟನೆಗಳು ನಡೆದಿವೆ.

ಇಸ್ರೇಲ್‌–ಹಮಾಸ್‌ ಯುದ್ಧ ಆರಂಭವಾದ ಬಳಿಕ ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್‌ ಸೇನೆ ಮತ್ತು ಪ್ಯಾಲೆಸ್ಟೀನಿಯರ ನಡುವೆ ಹಲವು ಸಲ ಸಂಘರ್ಷ ನಡೆದಿದೆ. 2023ರ ಅಕ್ಟೋಬರ್‌ ಬಳಿಕ ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್‌ ಸೇನೆಯ ಗುಂಡಿನ ದಾಳಿಗೆ 835 ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.