ADVERTISEMENT

ಕಮಲಾ ಹ್ಯಾರಿಸ್‌ ಕ್ಷಮೆಗೆ ಪಟ್ಟು

ಪಿಟಿಐ
Published 30 ಜೂನ್ 2019, 19:30 IST
Last Updated 30 ಜೂನ್ 2019, 19:30 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌    

ವಾಷಿಂಗ್ಟನ್‌: ತಾರತಮ್ಯ ನೀತಿಯನ್ನು 2011ರಲ್ಲಿ ಸಮರ್ಥಿಸಿಕೊಂಡಿದ್ದ ಭಾರತೀಯ ಸಂಜಾತೆ ಡೆಮಾ ಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಸಿಖ್‌ ಸಮುದಾಯ ಆನ್‌ಲೈನ್‌ ಅಭಿಯಾನ ಪ್ರಾರಂಭಿಸಿದೆ.

ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದ ಸಂದರ್ಭದಲ್ಲಿ ಕಮಲಾ ಹ್ಯಾರಿಸ್‌, ವೈದ್ಯಕೀಯ ವಿನಾಯಿತಿ ಹೊರತಾಗಿಯೂ, ರಾಜ್ಯದ ಜೈಲು ಅಧಿಕಾರಿಗಳು ಗಡ್ಡ ಬೆಳೆಸುವುದನ್ನು ನಿಷೇಧಿಸುವ ನೀತಿಯನ್ನು ಸಮರ್ಥಿಸಿಕೊಂಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

‘ಕಮಲಾ ಹ್ಯಾರಿಸ್‌, ವಿರೋಧಿಗಳಿಗೆ ನಾಗರಿಕ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡುತ್ತಾರೆ. ಅಮೆರಿಕದಲ್ಲಿರುವ ಸಿಖ್ಖರ ನಾಗರಿಕ ಹಕ್ಕುಗಳಿಗೆ ಬೆಲೆ ನೀಡಬೇಕೆಂಬುದು ಅವರಿಗೆ ತಿಳಿದಿಲ್ಲ. ತಕ್ಷಣವೇ ಅವರು ಸಮುದಾಯದ ಕ್ಷಮೆಯಾಚಿಸಬೇಕು’ ಎಂದುವಕೀಲ ಮತ್ತು ರಾಜಕೀಯ ಸಲಹೆಗಾರ ರಾಜ್‌ದೀಪ್ ಸಿಂಗ್ ಜಾಲಿ ಹೇಳಿದ್ದಾರೆ.

ADVERTISEMENT

‘ಸೇನೆಯಲ್ಲಿರುವ ಸಿಖ್ಖರು ತಮ್ಮ ಧರ್ಮ ಪಾಲಿಸಲು ಅವಕಾಶ ಒದಗಿಸುವ ಮೂಲಕ ಒಬಾಮ ಸರ್ಕಾರ ಮಹತ್ವದ ಹೆಜ್ಜೆ ಇರಿಸಿತ್ತು.ಈ ಆರೋಪಗಳಿಗೆ ಹ್ಯಾರಿಸ್‌ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.