ADVERTISEMENT

ಸಿಂಗಪುರದಲ್ಲಿ ವೇಶ್ಯಾವಾಟಿಕೆ ಚಟುವಟಿಕೆಗಳ ಆರೋಪ: ಭಾರತೀಯ ಮೂಲದ ಇಬ್ಬರಿಗೆ ಶಿಕ್ಷೆ

ಪಿಟಿಐ
Published 26 ಆಗಸ್ಟ್ 2021, 8:38 IST
Last Updated 26 ಆಗಸ್ಟ್ 2021, 8:38 IST
ನ್ಯಾಯಾಲಯ– ಪ್ರಾತಿನಿಧಿಕ ಚಿತ್ರ
ನ್ಯಾಯಾಲಯ– ಪ್ರಾತಿನಿಧಿಕ ಚಿತ್ರ   

ಸಿಂಗಪುರ: ವೇಶ್ಯಾವಾಟಿಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಸಿಂಗಪುರದ ಇಬ್ಬರು ಕಾಯಂ ನಿವಾಸಿಗಳಿಗೆ ವಿಧಿಸಿದ್ದ ಜೈಲು ಶಿಕ್ಷೆ ಮತ್ತು ದಂಡವನ್ನು ಸಿಂಗಪುರ ಹೈಕೋರ್ಟ್‌ ಎತ್ತಿಹಿಡಿದಿದೆ.

ವೇಶ್ಯಾವಾಟಿಕೆ ಸಂಬಂಧಿಸಿದ ಪ್ರಕರಣಗಳು ಮತ್ತು ಕಾಲಿವುಡ್‌ ಕ್ಲಬ್‌ನಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಎ. ಶಶಿಕುಮಾರ್ (46) ಮತ್ತು ಅವರ ಸಿಂಗಪುರದ ಪಾಲುದಾರ ರಾಜೇಂದ್ರನ್ ನಾಗರೆತಿನಂ (60) ಅವರು ತಪ್ಪಿತಸ್ಥರೆಂದು ಸಾಬೀತಾಗಿತ್ತು.

ಇದೇ ವೇಳೆ ಆರೋಪಿ ರಾಜೇಂದ್ರನನ್ನು ಒಂದು ಪ್ರಕರಣದಿಂದ ನ್ಯಾಯಾಲಯ ಖುಲಾಸೆಗೊಳಿಸಿತು. ಇತರೆ ಎರಡು ಪ್ರಕರಣಗಳಲ್ಲಿ ವಿಧಿಸಿದ್ದ 30 ತಿಂಗಳ ಸಜೆಯನ್ನು 19 ತಿಂಗಳಿಗೆ ಕಡಿತಗೊಳಿಸಿ, ದಂಡವನ್ನು ₹1.64 ಲಕ್ಷದಿಂದ ₹1.37 ಲಕ್ಷಕ್ಕೆ ಕಡಿಮೆ ಮಾಡಿ ತೀರ್ಪು ನೀಡಿದೆ.

ADVERTISEMENT

ಎ. ಶಶಿಕುಮಾರ್‌ ಅವರಿಗೆ 16 ತಿಂಗಳ ಸೆರೆವಾಸದ ಶಿಕ್ಷೆ ಮತ್ತು ₹6.03 ಲಕ್ಷ ದಂಡವನ್ನು ವಿಧಿಸಿದೆ.

2015 ಮತ್ತು 2016ರಲ್ಲಿ ಸಿಂಗಪುರಕ್ಕೆ ಬಂದಿದ್ದ ಇಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಬಲವಂತವಾಗಿ ವೇಶ್ಯಾ ವಾಟಿಕೆಗೆ ತಳ್ಳಿದ ಆರೋಪದ ಮೇಲೆ ಈ ಇಬ್ಬರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.