ದೀಪಾವಳಿ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ಮಣಿಪುರ ಸಾಂಸ್ಕೃತಿಕ ತಂಡ
ಸಿಂಗಪುರ: ಸಿಂಗಪುರದಲ್ಲಿ 2 ತಿಂಗಳುಗಳ ಕಾಲ ನಡೆಯುವ ದೀಪಾವಳಿ ಸಂಭ್ರಮಾಚರಣೆಯ ಆರಂಭೋತ್ಸವದಲ್ಲಿ ಮಣಿಪುರದ ಸಾಂಸ್ಕೃತಿಕ ತಂಡ ಪ್ರದರ್ಶನ ನೀಡಿದೆ.
ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಸಿಂಗಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಸೇರಿದಂತೆ 700 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.
‘ಭಾರತದ ಮಣಿಪುರ ರಾಜ್ಯದ ಸಾಂಸ್ಕೃತಿಕ ತಂಡದ ಕಲೆಯ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದೆ’ ಎಂದು ಸಿಂಗಪುರದಲ್ಲಿನ ಭಾರತದ ಹೈಕಮಿಷನ್ ಭಾನುವಾರ ಹೇಳಿದೆ.
ಭಾನುವಾರವೂ ಮಣಿಪುರ ತಂಡ ಪ್ರದರ್ಶನ ನೀಡಲಿದೆ ಎಂದು ಹೈಕಮಿಷನ್ ಹೇಳಿದೆ.
ಸಿಂಗಪುರದಲ್ಲಿರುವ ಭಾರತದ ಹೈಕಮಿಷನ್ ಮಣಿಪುರ ತಂಡವನ್ನು ಆಹ್ವಾನಿಸಿದ್ದು, ಭಾರತೀಯ ಸಾಂಸ್ಕೃತಿಕ ಮಂಡಳಿಯ ಬೆಂಬಲದಿಂದ ಪ್ರದರ್ಶನ ನೀಡಿದೆ.
ಸಿಂಗಪುರದ ನಾಗರಿಕರು ಅ.20ರಂದು ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಿದ್ದು, ಅಂದು ಅಧಿಕೃತ ರಜೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.